ಕರ್ನಾಟಕದ ರಾಜಕೀಯ – ನನ್ನ ಅಂತರಾಳದ ಮಾತು

ಸ್ನೇಹಿತರೇ,
ನಮಸ್ಕಾರ! ಮತ್ತೊಮ್ಮೆ ನಿಮ್ಮೊಂದಿಗೆ ನನ್ನ ಮನದಾಳದ ಮಾತನ್ನು ಹಂಚಿಕೊಳ್ಳಲೆಂದು ಈ ಅಂಕಣದೊಂದಿಗೆ ಬಂದಿದ್ದೇನೆ. ಈ ಬಾರಿ ನಮ್ಮ ಕರ್ನಾಟಕ ಎಲೆಕ್ಷನ್ ಪರಿಣಾಮದ ಬಗ್ಗೆ ನನ್ನೆರಡು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ.
ಈಗಾಗಲೇ ನಾವೆಲ್ಲ ಈ ಕರ್ನಾಟಕದ ಎಲೆಕ್ಷನ್ ಕರ್ಮಕಾಂಡ ನೋಡಿದ್ದೀವಿ. ಇನ್ನೇನು ಜನತಾದಳ ಸೆಕ್ಯುಲರ್ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ಮಾಡ್ತಾ ಇದಾವೆ. ಎಲೆಕ್ಷನ್ ರಿಸಲ್ಟ್ ಬಂದಾಗಲೇ ಜನರಿಗೆ ಇದು ಏನೋ ಎಡವಟ್ಟಾಗಿದೆ ಎಂದು ಗೊತ್ತಾಯ್ತು. ಆರು ಕೋಟಿ ಕರ್ನಾಟಕದ ಜನ ಸುಮ್ನೆ ನಾವೆಲ್ಲ ಗೂಬೆ ಆದ್ವಿ ಅಂತ ಚುಪ್ ಛಾಪ್ ಆಗ್ಬಿಟ್ರು ಆದ್ರೆ ಮೀಡಿಯಾ ಹಾಗೂ ರಾಜಕಾರಣಿಗಳ ಕಿತ್ತಾಟ ನೋಡಿ ಈ ಪ್ರಜಾಪ್ರಭುತ್ವ ಯಾಕ ಬೇಕಾಗಿತ್ತು ಅಂತ ಎಲ್ಲರಿಗೂ ಈಗಾಗಲೇ ಅನ್ನಿಸಿರಬೇಕು.

ಕರ್ನಾಟಕದ ಜನ ಎಲೆಕ್ಷನ್ ರಿಸಲ್ಟ್ ಬಗ್ಗೆ ತಲೆ ಕೆಡಿಸ್ಕೊಳೋದನ್ನ ನಿಲ್ಲಿಸಬೇಕು. ನಿಜವಾಗಿ ಹೇಳೋದಾದ್ರೆ, ಈ ಎಲೆಕ್ಷನ್ ಮಾಡಿಲ್ಲ ಅಂದ್ರೂನೂ ಓಕೆ ಆಗತಿತ್ತು.. ಒಂದು ಕತ್ತೆ ಅಥವಾ ನರಿ ಅಧಿಕಾರಕ್ಕೆ ಬಂದ್ರೂ ನಮ್ಮ ಕನ್ನಡ ಜನಕ್ಕೆ ಪರಿಣಾಮ ಬೀಳ್ತಾ ಇರ್ಲಿಲ್ಲ. ಯಾಕೆ ಹಾಂಗೆ ಹೇಳ್ತಿದೀನಿ ಅಂತ ನೀವು ಸ್ವಲ್ಪ ಅರ್ಥ ಮಾಡ್ಕೊಳ್ಳಿ.
70 ಪರ್ಸಂಟೇಜ್ ಆವರೇಜ್ ಮತದಾನ ಕರ್ನಾಟಕ ಉದ್ದಕ್ಕೂ ಮತದಾನ ಆಗಿದೆ. BJP ಗೆ 36% ಹಾಗೂ ಕಾಂಗ್ರೆಸ್ 38% ಹಾಗೂ ಜನತಾ ದಳ ಸೆಕ್ಯುಲರ್ ಗೆ 18% ಮತ ಬಿದ್ದಿದೆ. ಇನ್ನು ಉಳಿದ 2% ಜನ NOTA ಹಾಗೂ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ಸ್ ಗೆ ಮತ ಹಾಕಿದ್ದಾರೆ. ನನ್ನ ಪ್ರಕಾರ ಕರ್ನಾಟಕದ ಜನಸಂಖ್ಯೆ ತಕೊಂಡ್ರೆ 100 ಜನರಲ್ಲಿ 25 ಜನ ಬಿಜೆಪಿ ಗೆ ಹಾಕಿದ್ರೆ, 26 ಜನ ಕಾಂಗ್ರೆಸ್ ಗೆ ಹಾಕಿದ್ರೆ, 17 ಜನ ಜನತಾದಳ ಸೆಕ್ಯುಲರ್ ಗೆ ಹಾಕಿದ್ದಾರೆ. ಆದ್ರೆ, ಮಿಕ್ಕಿದ 31 ಜನರಿಗೆ ಯಾರು ಬಂದ್ರೆ ಏನು ಅಂತ ಅಟ್ಟಿಟ್ಯೂಡ್ ! ಈ ಯಾರು ಬಂದ್ರೆ ಏನು ಎನ್ನೋವ್ರ ಸಂಖ್ಯೆ ಜಾಸ್ತಿ ಇರೋದ್ರಿಂದ ಯಾವನು ಕರ್ನಾಟಕ ಅಳಿದ್ರೂ ಏನು ವ್ಯತ್ಯಾಸ ಆಗೋಲ್ಲ. ಇದೆಂಥ ವಿಪರ್ಯಾಸ ಸ್ವಾಮಿ? ಇಷ್ಟೆಲ್ಲಾ ಬೇಕಿತ್ತಾ?

ಇನ್ನು ಬೆಂಗಳೂರು ಜನರ ಪ್ರೊಬ್ಲೆಮ್ಮೇ ಬೇರೆ. ಫೇಸ್ಬುಕ್, ವಾಟ್ಸಪ್ಪ್ ಎಲ್ಲ ಕಡೆ ಬಡಕೊಂಡು ಕೂಗಾಡ್ತಾ ಇದ್ರು ಜನ! ಬೆಂಗಳೂರು ಸೌತ್, ನಾರ್ತ್ ಹಾಗೂ ಅರ್ಬನ್ ಕ್ಷೇತ್ರದಲ್ಲಿ ಸರಾಸರಿ ಕೇವಲ 40% ವೋಟ್ ಆಗಿದೆಯಂತೆ. ಇನ್ನು ಮಿಕ್ಕಿದ್ದ 60% ಜನ ಏನು ಮಾಡಿದ್ರು? ಇವ್ರೆಲ್ಲ ಮುಖ್ಯವಾಗಿ IT / BT ನಲ್ಲಿ ಕೆಲಸ ಮಾಡೋ ಜನ ಅಂದ್ಕೊಡಿದೀನಿ. ಎಲೆಕ್ಷನ್ ಬಂತು ಅಂದ್ರೆ ಒಂದು ವೀಕ್ ಎಂಡ್ ದಿನ ಹೆಚ್ಚು ಸಿಕ್ತು ಅಂತ ಊರಾಚೆ ರೆಸಾರ್ಟ್ ಅಥವಾ ಟ್ರೆಕಿಂಗ್ ಹೋಗ್ತಾರೆ. ಆದ್ರೆ ಇವ್ರಿಗೆ ಸರ್ಕಾರ ಯಾವುದೇ ಬರ್ಲಿ ಏನೂ ಕೇರ್ ಇಲ್ಲ. ಇಂಥ ಬುದ್ದಿವಂತ ಜನರಿಗೆ ಏನೂ ಹೇಳಿದ್ರೂ ಪ್ರಯೋಜನ ಇಲ್ಲ. ಎಲೆಕ್ಷನ್ ಕಮಿಷನ್ ಗೆ ಕೆಲವೊಂದು ಸಲಹೆ ಕೊಡೋಣ ಅಂತಿದೀನಿ. ಒಂದನೇದಾಗಿ, ಎಲೆಕ್ಷನ್ ವೀಕ್ ಡೇ ಇಡಿ ಅದರಿಂದ ಈ ಬೆಂಗಳೂರು ಜನ ಲಾಂಗ್ ವೀಕ್ಎಂಡ್ ಅಂತ ಓಡಿ ಹೋಗೋದನ್ನ ನಿಲ್ಸಿ ಸ್ವಲ್ಪ ಜನ ಆದ್ರೂ ಮತ ಹಾಕಬಹುದು. ವೀಕ್ ಎಂಡ್ ನೇ ಎಲೆಕ್ಷನ್ ಮಾಡಬೇಕು ಅಂದ್ರೆ, ಬೆಂಗಳೂರು ಜನರಿಗೆ ವೋಟ್ ಹಾಕಿದ್ರೆ ಫ್ರೀ ಲ್ಯಾಪ್ ಟಾಪ್ ಬ್ಯಾಗ್ ಅಥವಾ ಏನಾದ್ರೂ ಗ್ಯಾಜೆಟ್ ಗಿಫ್ಟ್ ಕೊಡಿ… ಅವಾಗ ಏನಾದ್ರೂ ಫ್ರೀ ಇದೆ ಅಂತ ವೋಟಿಂಗ್ ಬರ್ತಾರೋ ಏನೋ.
ಇದೇ ತರ ವೋಟಿಂಗ್ ಮಾಡ್ತಾ ಇದ್ರೆ ನೆಕ್ಸ್ಟ್ ಟೈಮ್ ಡೊನಾಲ್ಡ್ ಟ್ರಂಪ್ ಬಂದು ಸರಕಾರ ಮಾಡತಾನೆ ಕರ್ನಾಟಕದಲ್ಲಿ ಹುಷಾರು..

ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ…

ಟೇಕ್ ಇಟ್ ಈಜಿ, ಎಂಜಾಯ್ ದಿ ನ್ಯೂ ಗವರ್ನಮೆಂಟ್ – ಜೈ ಕರ್ನಾಟಕ ಮಾತೆ

Comments

comments