ಯುಕೆಯಲ್ಲಿರುವ ಎರಡು ಮುಖ್ಯ ಕನ್ನಡ ಸಂಘಟನೆಗಳಾದ ಕನ್ನಡಿಗರುಯುಕೆ ಮತ್ತು ಕನ್ನಡ ಬಳಗ ಯುಕೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಕನ್ನಡ ಸಮುದಾಯದ ಪ್ರಮುಖ ಸದಸ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಒಂದು ವಿಶೇಷ ವಾತಾವರಣವನ್ನೇ ಸೃಷ್ಟಿಸಿತ್ತು. ಭಾರತೀಯ ವಿದ್ಯಾಭವನದಲ್ಲಿರುವ ಸಂಸದ ಬಿರ್ಲಾ ಮಿಲೇನಿಯಂ ಆರ್ಟ್ ಗ್ಯಾಲರಿಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಮೊದಲು ಅಂಬರೀಷ್ ಬಗ್ಗೆ ತಾವು ಬರೆದ ಕವನವನ್ನು ಪಠಿಸಿದ ಡಾ.ಗಿರಿಧರ್ ಹಂಪಾಪುರ್, ನಿರ್ಮಾಪಕ-ನಟ ರಾಕ್ಲೈನ್ ವೆಂಕಟೇಶ್, ಡಾ.ನಂದಕುಮಾರ ಮತ್ತು ಸ್ವತಃ ಸಂಸದೆ ಸುಮಲತಾ ಅಂಬರೀಶ್ ಅವರ ಅನುಭವ ಮತ್ತು ಅಂಬರೀಷ್ ಅವರ ಮೌಲ್ಯಗಳು, ವಿನಮ್ರತೆ, ದಯೆ, ನಿಸ್ವಾರ್ಥತೆ, ಸಹಾನುಭೂತಿ ಮತ್ತು ಜನಪರ ನಿಲುವುಗಳ ಬಗ್ಗೆ ಅನೇಕ ಉದಾಹರಣೆಗಳನ್ನು ನೀಡಿ ನೆನಪುಗಳನ್ನು ಮೆಲುಕು ಹಾಕಿರುವುದು ಇಲ್ಲಿ ವಿಶೇಷವಾಗಿತ್ತು.
Read more