ಸಚಿವ ಸಿ ಟಿ ರವಿ ಲಂಡನ್ ಭೇಟಿ

ಪ್ರವಾಸೋದ್ಯಮ ಜೊತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಕ್ಕರೆ ಇಲಾಖೆಯ ಸಚಿವ ಸ್ಥಾನ ಹೊಂದಿರುವ ಶ್ರೀ ಸಿ ಟಿ ರವಿ ಭೇಟಿಯಾಗುವ ಅವಕಾಶ ಕೊನೆಗೂ ಲಂಡನ್ ನಲ್ಲಿ ಬಂದಿತು. ಅಕ್ಟೋಬರ್ ೨೦೧೯ ರಲ್ಲಿ ಸಚಿವರನ್ನು ಅಧಿಕೃತವಾಗಿ ಕನ್ನಡಿಗರುಯುಕೆ ವತಿಯಿಂದ ೧೫ ನೇ ವಾರ್ಷಿಕ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಮಂತ್ರಣ ನೀಡಲಾಗಿತ್ತು. ಅವರ ಲಂಡನ್ ಪ್ರಯಾಣವೂ ಆಗ ಖಚಿತವಾಗಿತ್ತು. ಆದರೆ ಉಪಚುನಾವಣೆಯ ಪ್ರಯುಕ್ತ ಕೊನೆಯ ಕೊನೆಗಳಿಗೆಯಲ್ಲಿ ಅವರ ಪ್ರಯಾಣ ರದ್ದುಗೊಂಡ ವಿಷಯವನ್ನು ಸಚಿವರ ಸಲೆಹೆಗಾರ ಶ್ರೀ ರತ್ನಾಕರ್ ಅವರು ತಿಳಿಸಿದಾಗ ರಾಜ್ಯೋತ್ಸವ ಕಾರ್ಯಕ್ರಮದ ಪಟ್ಟಿಯಿಂದ ಕೈಬಿಡಲಾಗಿತ್ತು. ಅದೇ ಸಮಯದಲ್ಲಿ ಚಿರಂತನ ದಾವಣಗೆರೆ ತಂಡದ ನಿರ್ದೇಶಕರಾದ ದೀಪಾ ರಾವ್ ಅವರು ಸಚಿವರನ್ನು ಭೇಟಿಯಾದಾಗ ಕನ್ನಡಿಗರುಯುಕೆ ಕಾರ್ಯಕ್ರಮದ ಬಗ್ಗೆ ಅವರಿಂದ ತಿಳಿದು, ಸ್ನೇಹಯಾನ ಪತ್ರಿಕೆಗೆ ಒಂದು ಸಂದೇಶವನ್ನು ಕೂಡ ಕಳಿಸಿದ್ದರು. ರಾಜ್ಯೋತ್ಸವಕ್ಕೆ ಬರಲಾಗದಿದ್ದರೂ ಸಚಿವರ ಸಂದೇಶವನ್ನು ಸ್ನೇಹಯಾನ ಪತ್ರಿಕೆಯಲ್ಲಿ ಪ್ರಕಟಿಸುವ ಸದವಕಾಶ ಸಿಕ್ಕಿತು.

ಮೊನ್ನೆ ಜನವರಿ ೨೦ ರಂದು ಸಚಿವರು ಕರ್ನಾಟಕ ಪ್ರವಾಸೋದ್ಯಮದ ಒಂದು ರೋಡ್ ಶೋ ಗೆ ಬರುತ್ತಾರೆಂದು ರತ್ನಾಕರ್ ಅವರು ತಿಳಿಸಿದಾಗ ನಾನು ಕನ್ನಡಿಗರುಯುಕೆ ತಂಡದಿಂದ ಸಿ ಟಿ ರವಿ ಅವರನ್ನು ಭೇಟಿಯಾಗಿ ಸ್ನೇಹಯಾನ ಪತ್ರಿಕೆಯನ್ನು ಅವರೊಂದಿಗೆ ಹಂಚಿಕೊಳ್ಳುವ ಅವಕಾಶ ಕೊಡಿ ಎಂದು ಕೇಳಿಕೊಂಡೆ. ೨೨ ನೇ ಜನವರಿ ಒಂದು ರೋಡ್ ಶೋ ಇದೆ, ಅದಾದಮೇಲೆ ಭೇಟಿಯಾಗಬಹುದು ಎಂದು ತಿಳಿಸಿ ಅವರ ಭೇಟಿ ನಿರ್ದಾರವಾಯಿತು. Shri H. T Ratnakar, Adviser – Tourism & Hospitality, Shri Vijay Sharma, Director, Karnataka Tourism, Shri K. N Ramesh, Director, Department of Tourism ಇವರೆಲ್ಲಾ ಸಚಿವರ ಜೊತೆಗಿದ್ದರು.

ಕಳೆದ ಅಸೆಂಬ್ಲಿಯ ಎಲೆಕ್ಷನ್ ನಲ್ಲಿ ಕರ್ನಾಟಕದ ಸಾಕಷ್ಟು ರಾಜಕಾರಣಿಗಳನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡ್ತಾ ಇದ್ದೆ. ಸಿ ಟಿ ರವಿ ಅವರ ಟ್ವಿಟ್ಟರ್ ನಲ್ಲಿ ಎದುರಾಳಿಗಳಿಗೆ ತೀವ್ರ ದಾಳಿಯ ಟ್ವೀಟ್ ನೋಡಿ ಇವರು ತುಂಬಾ ಪ್ರಭಾವಿ ಯುವ ರಾಜಕಾರಣಿ ಎಂದು ತಿಳಿದಿದ್ದೆ. ಆದರೆ ಅವರ ಮೊದಲ ಭೇಟಿಯಲ್ಲಿ ನನಗೆ ಕಂಡಿದ್ದು ಅವರ ಸರಳ ವ್ಯಕ್ತಿತ್ವ ಹಾಗೂ ಸಹನಶೀಲತೆಯ ಮಾತುಗಳು. ತುಂಬಾ ಮೃದುವಾಗಿ ನಮ್ಮೊಂದಿಗೆ ಮಾತುಕತೆ ಶುರುವಾದಾಗ ಸಾಕಷ್ಟು ವಿಷಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ದೊರಕಿತು. ಯಾಕೆ ಯುಕೆ ಯಲ್ಲಿ ೨೦ಕ್ಕೂ ಹೆಚ್ಚು ಕನ್ನಡ ಸಂಘಗಳಿವೆಯಂತಲ್ವಾ ಅಂತ ಕೇಳಿದಾಗ, ನಾವು ಮೂರು ವರ್ಷದಿಂದ ಎಲ್ಲಾ ಕನ್ನಡ ಸಂಘಗಳ ಲೆಕ್ಕವನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಇರೋದು ಸಚಿವರಿಗೆ ಆಗಲೇ ಮಾಹಿತಿ ಇದೆಯಲ್ವಾ ಅಂತ ಮುಜುಗರವಾಯಿತು. ಸರ್, ಮುಂಚೆ ಇಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡದ ಅಭಾವವಿತ್ತು ಹೀಗಾಗಿ ಕನ್ನಡ ಬಳಗ ಹಾಗೂ ಕನ್ನಡಿಗರುಯುಕೆ ಸಂಸ್ಥೆಗಳ ಕಾರ್ಯಕ್ರಮಕ್ಕೆ ದೂರ ದೂರದಿಂದ ಕನ್ನಡಿಗರು ಬಂದು ಆನಂದಿಸುತ್ತಿದ್ದರು ಆದರೆ ಈಗ ಯುಕೆಯಲ್ಲಿ ಕನ್ನಡದ ಪ್ರವಾಹವಿದೆ. ಮೂಲೆ ಮೂಲೆಯಲ್ಲಿ ಕನ್ನಡಿಗರು ಒಂದೊಂದು ಗುಂಪುಗಳನ್ನು ಮಾಡಿ ಕನ್ನಡವನ್ನು ಬೆಳೆಸುತ್ತಿದ್ದಾರೆ. ಆದರೆ ಒಂದೇ ಧ್ವನಿ, ಒಂದೇ ಸ್ವರ ಯುನೈಟೆಡ್ ಕಿಂಗ್ಡಮ್ ನಿಂದ ಆಚೆ ಹೋಗುತ್ತಿಲ್ಲ ಅದಕ್ಕಾಗಿ ಅಕ್ಕಾ ತರ ಒಂದು ಪ್ರಭಾವಿ ಕನ್ನಡದದ ಧ್ವನಿ ಇಲ್ಲಿ ಬೇಕಾಗಿದೆ. ಈಗಲೂ ಕನ್ನಡ ಬಳಗ ಹಾಗೂ ಕನ್ನಡಿಗರುಯುಕೆ ಎರಡು ರಿಜಿಸ್ಟರ್ಡ್ ಕನ್ನಡ ಸಂಸ್ಥೆಗಳು ಕನ್ನಡ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದಾವೆ ಎಂದೆವು. ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು. ಕನ್ಸರ್ವೇಟಿವ್ ಪಾರ್ಟಿಯ ಇತ್ತೀಚಿನ ಭರ್ಜರಿ ವಿಜಯ, ಕನ್ನಡ ಸಾಂಸ್ಕೃತಿಕ ಇಲಾಖೆಯ ಮುಂದಿನ ಕಾರ್ಯಕ್ರಮಗಳು, ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮಗಳು, ಕನ್ನಡ ಮಾಧ್ಯಮ ಶಾಲೆಗಳು ಹೇಗೆ ಹೀನಾಯಕರವಾಗಿ ಮುಚ್ಚುತ್ತಿವೆ ಎಂಬ ಬಗ್ಗೆ ಚರ್ಚೆ ಇತ್ಯಾದಿ ವಿಷಯಗಳ ಬಗ್ಗೆ ಸಚಿವರೇ ತಮ್ಮ ಯು ಟ್ಯೂಬ್ ಮಾಧ್ಯಮದ ಮೂಲಕ ಹಂಚಿಕೊಂಡಿರುವದು ಖುಷಿ ತಂದಿತು.
ಸಚಿವರ ಮನದಾಳದ ಮಾತುಗಳನ್ನು ನೀವೇ ಕೆಳಗಿನ ಲಿಂಕ್ ಮೂಲಕ ಕೇಳಿ.

ಕನ್ನಡಿಗರುಯುಕೆ ಹಾಗೂ ಯುಕೆ ಕನ್ನಡಿಗರ ವತಿಯಿಂದ ಸ್ನೇಹಯಾನ – ನೆನಪುಗಳ ಮೆರವಣಿಗೆ ಪತ್ರಿಕೆಯನ್ನು ಸಚಿವರಿಗೆ ನೀಡಿ ಸನ್ಮಾನಿಸಲಾಯಿತು. ಹಾಗೆಯೇ, ಮುಖ್ಯ ಮಂತ್ರಿಗಳಿಗೂ ಪತ್ರಿಕೆಯ ಒಂದು ಪ್ರತಿಯನ್ನು ದಯವಿಟ್ಟು ನಮ್ಮ ವತಿಯಿಂದ ಕೊಡಿ ಎಂದು ಮನವಿ ಮಾಡಿಕೊಂಡೆ.
ಸಚಿವ ಸಿ ಟಿ ರವಿ ಅವರ ಜೊತೆ ಲಂಡನ್ ನಲ್ಲಿ ಭೇಟಿ ಭೋಜನದ ಜೊತೆ ಆಸಕ್ತಿದಾಯಕ ಸಂಭಾಷಣೆಯಲ್ಲಿ ನೆರವೇರಿತು.

~ಗಣಪತಿ ಭಟ್

Comments

comments