Fake/Paid Facebook Likes ಮೂಲಕ ಕನ್ನಡ ಸಂಘ ಕಟ್ಟಬಹುದೇ?

ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಅಕ್ಕ ಯುಕೆ (ACKA UK ) ಅಡಿಯಲ್ಲಿ ಒಂದು ಕನ್ನಡ ಪ್ರೀಮಿಯರ್ ಲೀಗ್ ನಡೀತಾ ಇದೆ ಎಂಬುದನ್ನು ನಾನು ಗಮನಿಸಿದೆ. ಕ್ರಿಕೆಟ್ ಟೂರ್ನಮೆಂಟ್ ಮಾಡ್ತಾ ಇದಾರೆ ಸರಿ ಆದರೆ ಈ ಕ್ರಿಕೆಟ್ ಮೂಲಕ ಇವರು ಅಕ್ಕ ಯುಕೆ ಎಂಬ ಸಂಸ್ಥೆಯನ್ನು ಪ್ರಚಾರಕ್ಕೆ ಹಾಕಿದ್ದಾರೆ ಎಂಬುದನ್ನು ಕೂಡ ಗಮನಿಸಿದೆ. ಸಂಸ್ಥೆ ಹುಟ್ಟು ಹಾಕುವುದು ಇಲ್ಲಿ ಆಂಗ್ಲ ನಾಡಿನಲ್ಲಿ ಸಾಮಾನ್ಯ ಯಾಕೆಂದರೆ ಇಲ್ಲಿ ಹಲವಾರು ಕನ್ನಡ ಸಂಘ ಸಂಸ್ಥೆಯವರು ಈಗಾಗಲೇ ತಮ್ಮ ತಮ್ಮ ಪ್ರಾಂತ್ಯದಲ್ಲಿ ಸಕ್ರೀಯವಾಗಿದ್ದಾರೆ, ಬೇರೆ ಬೇರೆ ರೀತಿಯಲ್ಲಿ ಒಂದೆಲ್ಲಾ ಒಂದು ಗುಂಪು, ಸಂಘಟನೆಯನ್ನು ಮಾಡಿಕೊಂಡು ಕೈಲಾದಷ್ಟು ಪ್ರಾಮಾಣಿಕವಾಗಿ ಕನ್ನಡ ಪಸರಿಸುವ ಪ್ರಯತ್ನ ಮಾಡುವವರನ್ನು ಇತ್ತೀಚಿಗೆ ನಾವೆಲ್ಲ ನೋಡಿದ್ದೇವೆ ಅಂಥವರಿಗೆ ನನ್ನ ವಂದನೆಗಳು.

ಆದರೆ ಈ ಅಕ್ಕ ಯುಕೆ ಯ ಅಂತರ್ಜಾಲದ ಮುಖಪುಟ (Facebook Page ) ನನಗೆ ತುಂಬಾ ಅಚ್ಚರಿ ಮೂಡಿಸಿದೆ ! ಯಾಕೆಂದರೆ ಅವರ ಫೇಸ್ ಬುಕ್ ಪೇಜ್ ನಲ್ಲಿ “ಪ್ರಾಂತ್ಯ ಹಲವು ಧ್ಯೇಯ ಒಂದೆ” ಎಂಬ ಘೋಷಣೆಯಲ್ಲಿ ನಮ್ಮ ಕನ್ನಡಿಗರಿಗೆ ನೆಲ ಹಾಗೂ ಸಂಸ್ಕೃತಿಯ ಮೇಲಿರುವ ಅಭಿಮಾನ ಹಾಗೂ ಗೌರವ ಪ್ರಶ್ನಾತೀತ ಎಂದು ಕನ್ನಡಿಗರ ಏಕೀಕರಣ ನಾವು ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಇದನ್ನು ಓದಿದ ನಾನು ದಿಗ್ಭ್ರಮೆಗೊಂಡೆ!

ಅತ್ಯಂತ ಗಮನೀಯವಾದ ವಿಷಯ ಏನೆಂದರೆ ಇವರ ಫೇಸ್ ಬುಕ್ ಪೇಜ್ ಗೆ ಒಂದೆರಡು ವಾರಗಳ ಹಿಂದೆ ಕೇವಲ 390 ಲೈಕ್ಸ್ ಇತ್ತು.. ಆದರೆ ಇಂದು ಇವರ ಪೇಜ್ ಲೈಕ್ಸ್ ಸುಮಾರು ಹದಿನೇಳು ಸಾವಿರ ಆಗಿದೆ, ಹಾಗೆಯೇ ಮೇಲಕ್ಕೇರುತ್ತಿದೆ.

ಜೂಲೈ 15 ರಂದು 393 ಲೈಕ್ಸ್ ಇದ್ದ ಇವರ Facebook Page, 28 July ನಲ್ಲಿ 3 ,300 ಲೈಕ್ಸ್ ಆಯಿತು… 29 July ಗೆ ಅದು 3,300 ರಿಂದ 5,832 ಲೈಕ್ಸ್ ಆಯಿತು..30 July ಬೆಳಿಗ್ಗೆ ಅದು 8,052 Likes ಆಗಿದೆ…ಇಂದು 31 ಜುಲೈ ಬೆಳಿಗ್ಗೆ 17,000 ಲೈಕ್ಸ್ ಆಗಿದೆ…eega ನೀವೇ ಯೋಚಿಸಿ, ಇಂದೊಂದು ಬೆರಗಾಗುವ ವಿಷಯವಲ್ಲವೇ ?

ಅಂದರೆ ಇವರ ಸಂಘ ರಾತ್ರೋ ರಾತ್ರಿ ಖ್ಯಾತಿ ಪಡೆದಿದೆಯೇ? ನಿನ್ನೆ 29 ಜುಲೈ ನಂದು ಸುಮಾರು 5 ಸಾವಿರ ಲೈಕ್ ಇದ್ದದ್ದು ಇಂದು ಈಗ 17,000 ಲೈಕ್ಸ್ ಆಗಿದೆ. ಈ ಸಂಘದ ಮಹಾನುಭಾವರು ಕನಿಷ್ಠ ಕನ್ನಡಿಗರಿರುವ ಆಂಗ್ಲ ನಾಡಿನಲ್ಲಿ ಗರಿಷ್ಟ ಮಟ್ಟದಲ್ಲಿ ತಮ್ಮ Facebook ಮೂಲಕ Likes ಪಡೆದಿರುವುದು ಅಚ್ಚರಿ ಅಲ್ಲದೇ ಇನ್ನೇನು? ಯಾಕೆಂದರೆ ಇವರ ಒಂದು ಫೇಸ್ಬುಕ್ ಪೇಜ್ ನೈಸರ್ಗಿಕವಾಗಿ ಬೆಳೆದಂತೆ ಕಾಣುವುದಿಲ್ಲ. ಕೆಲವರಿಗೆ ಇದು ಸಿಲ್ಲಿ ವಿಷಯ ಅನ್ನಿಸಬಹುದು, ಈ ರೀತಿಯ ನಕಲಿ ವಿಧಾನ ಅನುಸರಿಸುವವರ ಬಗ್ಗೆ ಗೊತ್ತಿರಲಿ ಎಂದು ನನ್ನ ಸಮಯವನ್ನು ತೆಗೆದುಕೊಂಡು ಈ ಬ್ಲಾಗ್ ಮೂಲಕ ಬರೆದಿದ್ದೇನೆ.

ಇದನ್ನೆಲ್ಲಾ ನೋಡಿದರೆ ಇವರ ಧ್ಯೇಯ ಆಗೂ ಅಡಿಪಾಯ Facebook ಮಾದ್ಯಮದಲ್ಲಿ Likes ಕೊಂಡುಕೊಂಡು ಕನ್ನಡ ಕಟ್ಟುವ ಕೆಲಸವಾಗಿದೆ ಎಂಬುದನ್ನು ತೋರಿಸುತ್ತದೆ. ಕ್ರಿಕೆಟ್ ಟೂರ್ನಮೆಂಟ್ ಹೆಸರಲ್ಲಿಯೂ ಒಂದು ಕನ್ನಡ ಸಂಘವನ್ನು ಈ ರೀತಿ Fake/Paid Facebook likes ಮೂಲಕ ಲಾಂಚ್ ಮಾಡುತ್ತಿರುವುದು ಒಂದು ದುರಂತ ಮಾದರಿ ಎಂದು ನನಗೆ ಅನ್ನಿಸುತ್ತಿದೆ. ಹೀಗಾಗಿ “ಪ್ರಾಂತ್ಯ ಹಲವು ಧ್ಯೇಯ ಒಂದೆ” ಎಂದು ಹೇಳುವ ಇವರು ಯುಕೆ ಕನ್ನಡಿಗರನ್ನು ಈ ರೀತಿ Fake Facebook Likes Mission ನಲ್ಲಿ ಭಾಗಿ ಮಾಡಿದ್ದಾರೆ ಎಂಬುದು ದೊಡ್ಡ ದುರಂತ ಅನ್ನಿಸುತ್ತಿದೆ.

ನಾವು ಕನ್ನಡಿಗರು ಸಾಮಾನ್ಯವಾಗಿ ಇನ್ನೊಬ್ಬ ಕನ್ನಡಿಗನನ್ನು ಅಥವಾ ಆಯೋಜಕರನ್ನು ಒಂದು ಒಳ್ಳೆಯ ದೃಷ್ಟಿಯಲ್ಲಿ ನೋಡಿ ಬೆಂಬಲ ಕೊಡುವುದು ಸಹಜ. ಅದೇ ರೀತಿ ನೂರಾರು ಕ್ರಿಕೆಟ್ ಪ್ರೇಮಿಗಳು, ಆಟಗಾರರು ಕೂಡ ಇದೇ ಒಂದು ಉದ್ದೇಶದಿಂದ ಈ ಒಂದು ಕ್ರಿಕೆಟ್ ಪ್ರೀಮಿಯರ್ ಲೀಗ್ ಅನ್ನು ಪ್ರೇರೇಪಿಸಿ ಭಾಗವಹಿಸಿರಬಹುದು ಆದರೆ ಫೇಕ್ ಲೈಕ್ ಗಳನ್ನು ಖರೀದಿಸಿ, ಅಕ್ಕ ಯುಕೆ ಎಂಬ ಅಮೇರಿಕಾ ಮಾದರಿಯಲ್ಲಿ ಒಂದು ಕನ್ನಡ ಸಂಘವನ್ನು ಕಟ್ಟಲು ಹೋಗುತ್ತಿರುವ ಈ ಆಯೋಜಕರು ಜಗತ್ತಿಗೆ ಯಾವ ಧ್ಯೇಯ ಹಾಗೂ ಮೌಲ್ಯಗಳನ್ನು ತೋರಿಸಿಕೊಡುತ್ತಿದ್ದಾರೆ ಎಂದು ನೀವೇ ಯೋಚಿಸಿ. ಯುಕೆ ಕನ್ನಡಿಗರಿಗೆ ಇದೀಗ ಹುಟ್ಟಿರುವ, ಗೊತ್ತಿಲ್ಲದೇ ಇರುವ ಇವರ ಫೇಸ್ಬುಕ್ ಪೇಜ್ ಅನ್ನು ಸುಮಾರು 8 ಸಾವಿರ ಜನ ಇಂದಿನವರೆಗೆ ಹುಚ್ಚೆದ್ದು ತಬ್ಬಿಕೊಂಡಿದ್ದಾರೆ ಅಂದರೆ ನಾನಂತೂ ನಂಬುವುದಿಲ್ಲ. ಇಂತಹ ವಂಚಿತ ಮನೋಭಾವನೆ ಇಟ್ಟು ಕನ್ನಡದ ಹೆಸರಿನಲ್ಲಿ ಜನರನ್ನು ಭ್ರಮೆಗೊಳಿಸಿ ವ್ಯವಹಾರ ಮಾಡುವವರನ್ನು ನಾನಂತೂ ಖಡಾ ಖಂಡಿತವಾಗಿ ಬಹಿಷ್ಕರಿಸುವೆ.

ಈ ನನ್ನ ಬ್ಲಾಗ್ ನೋಡಿ ಸ್ವಲ್ಪ ಜನ ಕಿರಿಕಿರಿಗೊಂಡು ನನ್ನ ಮೇಲೆ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಾರೆ ಎಂದು ಗೊತ್ತಿದೆ, ಮಾಡಿದರೆ ಮಾಡಲಿ, ಇದು ಮೊದಲಲ್ಲ, ಮುಂಚೆಯೂ ಕೂಡ ಸಾಗರೋತ್ತರ ಕನ್ನಡಿಗರ ಬೆಳ್ಳಿ ಹಬ್ಬ ಸಮಾರಂಭ ಎಂದು ತಪ್ಪು ಸಂದೇಶವನ್ನಾಧರಿಸಿ ಆಗಿನ ಮುಖ್ಯ ಮಂತ್ರಿಗಳಿಂದ ಪ್ರಶಂಶೆ ಪತ್ರದ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ನಂತರ ನನ್ನ ಹೆಸರನ್ನು ತೆಗೆದುಕೊಂಡು ಜೊತೆಗೆ ನಾನು ತೊಡಗಿಸಿಕೊಂಡಿರುವ ಸಂಘದ ಹೆಸರನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕೆಲವು ಕ್ಷುಲ್ಲಕ ಮನೋಭಾವನೆಯುಳ್ಳವರು ನಡೆಸುತ್ತಿರುವ ಒಂದು WhatsApp ಗುಂಪಿನಲ್ಲಿ ನಿರಂತರವಾಗಿ ನಿಂದನೆ ನಡೆದಿತ್ತು ಎಂಬ ವಿಷಯ ಗೊತ್ತಾಗಿದೆ.

ಯಾರ ಅಭಿಪ್ರಾಯ ಏನೇ ಇರಲಿ, ನನ್ನ ಅಭಿಪ್ರಾಯವನ್ನು ಈ ನನ್ನ ವಯುಕ್ತಿಕ ಬ್ಲಾಗ್ ಮೂಲಕ ಹಂಚಿಕೊಂಡಿದ್ದೇನೆ. ಆದರೆ ಈ ವಿಷಯವನ್ನು ಗಂಭೀರವಾಗಿ ಎಲ್ಲರೂ ಪರಿಗಣಿಸಬೇಕಾಗಿದೆ. ಏಕೆಂದರೆ, ನನಗೆ ಗೊತ್ತಿದ್ದ ಪ್ರಕಾರ ALL COUNTY KANNADA ASSOCIATION UK C.I.C ಒಂದು Private Limited ಕಂಪನಿಯಾಗಿ ರಿಜಿಸ್ಟರ್ ಆಗಿದೆ. ಕಂಪನಿಯಲ್ಲಿ ಇಬ್ಬರು ನಿರ್ದೇಶಕರಿದ್ದಾರೆ. ಜೊತೆಗೆ ಇದು Community Interest Company ಎಂದು ನೋಂದಾಯಿತವಾಗಿದೆ. ಈಗಾಗಲೇ ಕೆಲವು ಪ್ರಯೋಜಕರಿದ್ದು, ಆ ಮೂಲಕ ಹಣಕಾಸಿನ ಸೌಲಭ್ಯವಿದೆ ಎಂದು ಅನ್ನಿಸುತ್ತದೆ. ಒಂದು ಸಮೂದಾಯವನ್ನು ನಾವು ಪ್ರತಿನಿಧಿಸುತ್ತೇವೆ ಎನ್ನುವಾಗ ಇವರ ಒಂದು ಫೇಸ್ಬುಕ್ ಪೇಜ್ ಲೈಕ್ ಗಳು ಧಿಡೀರನೆ ಹೆಚ್ಚು ಆದಾಗ ಪ್ರಾಯೋಜಕತ್ವದ ಅಥವಾ ಕ್ರಿಕೆಟ್ ಟೂರ್ನಮೆಂಟ್ ನ ಹಣದಿಂದ ಲೈಕ್ಸ್ ಖರೀದಿ ಮಾಡಿರುವರೇ ಎಂದು ಪ್ರಶ್ನೆ ಮೂಡುತ್ತದೆ. ಹಾಗಿದ್ದರೆ ಕಮ್ಯೂನಿಟಿ ಕೆಲಸ ಮಾಡಬೇಕಾದಾಗ ಸಂಸ್ಥೆಗಳಿಗೆ ಫೇಸ್ಬುಕ್ ಲೈಕ್ ಹೆಚ್ಚಳ ಯಾಕೆ ಬೇಕು ಎಂಬ ಮುಖ್ಯ ಪ್ರಶ್ನೆ ಬರುತ್ತದೆ. ಇವರ ನಿರ್ದೇಶಕರಿಗೆ ಏನಾದರೂ ತ್ವರಿತವಾಗಿ ಎಲ್ಲರ ಆಕರ್ಷಣೆ ಪಡೆಯುವ ಉದ್ದೇಶವೇ ಎಂಬ ಪ್ರಶ್ನೆ ಕೂಡ ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಾಯಿಸಿ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಿಂದ ಗುರುತಿಸಿಕೊಳ್ಳುವ ಹಾಗೂ ಅವುಗಳಿಂದ ಅನುದಾನ ತೆಗೆದುಕೊಳ್ಳುವ ಚಪಲವೇ ಎಂಬ ಪ್ರಶ್ನೆಯೂ ಮೂಡುತ್ತದೆ. ನಮಗೆ ಗೊತ್ತಿಯುವಂತೆ, ಸಾಮಾನ್ಯವಾಗಿ ಒಂದು ವಾರದಲ್ಲಿ ೨೫ ಪಟ್ಟು ಲೈಕ್ ನಲ್ಲಿ ಹೆಚ್ಚಳ ನೈಸರ್ಗಿಕವಾಗಿ ಬರುವುದು ತುಂಬಾ ಕಷ್ಟ. ಇನ್ನು, ಕೆಲವರಿಗೆ ಇವನ್ಯಾರು ನಮಗೆ ಪಾಠ ಹೇಳುವವನು ಅನ್ನಿಸಬಹುದು. ಇರಲಿ, ಹಾಗೆಯೇ ಅಂದುಕೊಳ್ಳಿ.


ಒಳ್ಳೆಯ ದ್ಯೇಯ ಒಂದೇ ಅಲ್ಲ ತಮ್ಮ ಕಾರ್ಯ ವಿಧಾನದಲ್ಲಿ ಕೂಡ ಒಂದು ಒಳ್ಳೆಯ ಪ್ರಾಮಾಣಿಕ ಮನೋಭಾವನೆ ತೋರಿಸಿ ಒಂದು ಕನ್ನಡ ಸಂಘ ಕಟ್ಟಿ, ಕನ್ನಡ ಬಳಸಿ, ಬೆಳೆಸಿ, ಉಳಿಸಿ.
ಶುಭವಾಗಲಿ !

*ನಾನು ಬರೆದಿರುವುದು ನಿಮಗೆ ಸರಿ ಅಥವಾ ತಪ್ಪು ಏನನಿಸಿದರೂ ಬಹಿರಂಗವಾಗಿ ಕೆಳಗಡೆ ಕಾಮೆಂಟ್ ಮಾಡಿ

Comments

comments