ವಿಶ್ವವ್ಯಾಪಕ ಮಾಹಿತಿ ರಕ್ಷಣಾ ನಿಯಂತ್ರಣ – GDPR

Golbal Data Protection Regulation (ವಿಶ್ವವ್ಯಾಪಕ ಮಾಹಿತಿ ರಕ್ಷಣಾ ನಿಯಂತ್ರಣ) GDPR 

ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ GDPR (ವಿಶ್ವವ್ಯಾಪಕ ಡೇಟಾ ರಕ್ಷಣಾ ನಿಯಂತ್ರಣ) ಕಾನೂನು ಮೇ ೨೫ ರಿಂದ ಜಾರಿಗೆ ಬರ್ತಾ ಇದೆ. ಇದೊಂದು ಹೊಸ ಯುರೋಪ್ ಆದ್ಯಂತ ಅನ್ವಯಿಸುವ ಕಾನೂನು. ಯುನೈಟೆಡ್ ಕಿಂಗ್ಡಮ್ ನಲ್ಲಿ ಇದು ಸದ್ಯದಲ್ಲಿ ಚಾಲನೆಯಲ್ಲಿರುವ Data Protection Act 1998 ನ್ನು ಬದಲಾಯಿಸುತ್ತಾ ಇದೆ. ಈ ಹೊಸ ಕಾನೂನು ಪ್ರತಿಯೊಂದು ಸಂಸ್ಥೆಗಳಿಗೆ ವೈಯಕ್ತಿಕ ಸೂಕ್ಷ್ಮ ಮಾಹಿತಿಗಳನ್ನು ಹೊಸ ಕಟ್ಟುಪಾಡುಗಳ ಆದೇಶದಂತೆ ನಿರ್ವಹಿಸಲು ಆದೇಶಿಸುತ್ತದೆ.

ಈ ಕಾನೂನು ಚಾರಿಟಿ, ಅಧಿಕೃತ ಕನ್ನಡ ಸಂಘಗಳಿಗೆ ಅನ್ವಹಿಸುತ್ತದೆಯೇ?
ಹೌದು ಖಂಡಿತವಾಗಿಯೂ ಇದು ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಎಲ್ಲಾ ಚಿಕ್ಕ ಹಾಗೂ ದೊಡ್ಡ ಸಂಸ್ಥೆಗಳಿಗೆ ಅನ್ವಹಿಸುತ್ತದೆ.

ಯಾವ ಮಾಹಿತಿಗಳಿಗೆ GDPR ಅನ್ವಹಿಸುತ್ತದೆ?
GDPR ಮುಖ್ಯವಾಗಿ ವೈಯಕ್ತಿಕ ಸೂಕ್ಷ್ಮ ಮಾಹಿತಿಗಳಿಗೆ ಅನ್ವಹಿಸುತ್ತದೆ. ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ನಿಮ್ಮ ಸಂಸ್ಥೆ ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಸಂಗ್ರಹಿಸಿದ್ದಲ್ಲಿ ಹಾಗೂ ಗುರುತಿಸಲ್ಪಟ್ಟಲ್ಲಿ, ಈ ಕಾನೂನು ಅನ್ವಹಿಸುತ್ತದೆ.
ನಿಮ್ಮ ಸಂಸ್ಥೆ ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನೀವು ಯಾವುದೇ ಕಾರಣಕ್ಕೆ ವೈಯಕ್ತಿಕ ಸೂಕ್ಷ್ಮ ಮಾಹಿತಿಗಳನ್ನು ಸಂಸ್ಕರಣೆ ಮಾಡುತ್ತಿದ್ದಲ್ಲಿ GDPR ಕಾನೂನು ಅನ್ವಹಿಸುತ್ತದೆ.


GDPR – ಮುಖ್ಯ ಸೂತ್ರಗಳು
೧. ಕಾನೂನಿನ ಅರಿವು
ಮುಖ್ಯವಾಗಿ ನಿಮ್ಮ ಸಂಸ್ಥೆಯಲ್ಲಿರುವ ಎಲ್ಲಾ ಪ್ರಮುಖರಿಗೆ GDPR ಕಾನೂನಿನ ಬಗ್ಗೆ ಪೂರ್ವಭಾವಿಯಾಗಿ ಅರಿವು ನೀಡುವುದು. ನಿಮ್ಮ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಕಾನೂನು ಬದಲಾವಣೆಯ ಬಗ್ಗೆ ತಿಳಿದಿರಬೇಕು

೨. ನಿಮ್ಮ ಸಂಸ್ಥೆ ಹಿಡಿದಿಟ್ಟಿರುವ ಮಾಹಿತಿಗಳು
ನಿಮ್ಮ ಸಂಸ್ಥೆ ಹಿಡಿದಿಟ್ಟಿರುವ ಮಾಹಿತಿಗಳನ್ನು ದಾಖಲೆ ಮಾಡುವುದು ಅತ್ಯಗತ್ಯ. ಮಾಹಿತಿಗಳನ್ನು ಎಲ್ಲಿಂದ ಸಂಗ್ರಹಿಸಲಾಗುತ್ತದೆ, ಯಾರ ಜೊತೆ ಮಾಹಿತಿಗಳನ್ನು ಹಂಚಿಕೊಳ್ಳುತ್ತೀರಾ ಎಂದು ಅನೌಪಚಾರಿಕವಾಗಿ ಇದನ್ನು ದಾಖಲೆಪಟ್ಟಿ ಮಾಡಿ.

೩. ನಿಮ್ಮ ಸಂಸ್ಥೆಯ ಪ್ರೈವಸಿ ಇನ್ಫಾರ್ಮಶನ್ ಬಗ್ಗೆ ತಿಳಿಸಿ
ನಿಮ್ಮ ಸಂಸ್ಥೆಯ ಪ್ರೈವಸಿ ಇನ್ಫಾರ್ಮಶನ್ ಬಗ್ಗೆ ಏನಾದರೂ ಬದಲಾವಣೆ ಇದೆಯಾ ಎಂದು ಪರಿಶೀಲಿಸಿ. GDPR ಕಾನೂನಿನ ಪರ್ಯಾಪ್ತ ಏನಾದರೂ ಬದಲಾವಣೆ ಇದ್ದಲ್ಲಿ ಅದನ್ನು ಅಳವಡಿಸಿ

೪. ವಯುಕ್ತಿಕ ಅಧಿಕಾರ
ನೀವು ಸಂಗ್ರಹ ಮಾಡಿರುವ ಪ್ರತಿಯೊಬ್ಬನ ವೈಯಕ್ತಿಕ ಸೂಕ್ಷ್ಮ ಮಾಹಿತಿ ಅವನ ಅಥವಾ ಅವಳ ವಯುಕ್ತಿಕ ಅಧಿಕಾರ ಹೀಗಾಗಿ ಅದನ್ನು ಭದ್ರವಾಗಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಬೇಡದಿದ್ದಲ್ಲಿ ಹೇಗೆ ಸೂಕ್ತವಾಗಿ ಅಳಿಸುವ ಬಗ್ಗೆ ಪರಿಶೀಲಿಸಿ

೫. ಒಪ್ಪಿಗೆ
ಹೊಸದಾಗಿ ಬಂದಿರುವ GDPR ಕಾನೂನಿನ ಪ್ರಕಾರ ಸಂತೆಗಳು ಯಾವುದೇ ವೈಯಕ್ತಿಕ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸುತ್ತಿದಲ್ಲಿ, ಪ್ರತಿಯೊಂದು ಉದ್ದೇಶಕ್ಕೂ ಪ್ರತ್ಯೇಕ ಒಪ್ಪಿಗೆ ಪಡೆಯುವುದು ಕಡ್ಡಾಯ. ಹೀಗಾಗಿ ಒಪ್ಪಿಗೆಯನ್ನು ಹೇಗೆ ಕೋರುತ್ತೀರಾ, ಯಾವ ರೀತಿ ಅದನ್ನು ಸಂಗ್ರಹಿಸುತ್ತೀರಾ, ಅದರಲ್ಲಿ ಏನಾದರೂ ಬದಲಾವಣೆ ಬೇಕಾಗಿದೆಯಾ ಎಂದು ಪರಿಶೀಲಿಸಿ

GDPR ಕಾನೂನನ್ನು ಉಲ್ಲಂಘನೆ ಮಾಡಿದ್ದಲ್ಲಿ, ಗಂಭೀರವಾಗಿ ಸಂಸ್ಥೆಯ ಟರ್ನ್ಓವರ್ ಪ್ರಕಾರ ದಂಡ ವಿಧಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ಕೊಂಡಿಯನ್ನು ಕ್ಲಿಕ್ ಮಾಡಿ.

https://ico.org.uk/for-organisations/business/guide-to-the-general-data-protection-regulation-gdpr-faqs/

Comments

comments