ಹಬ್ಬ ಯುನೈಟೆಡ್ ಕಿಂಗ್ಡಮ್ – ಹವ್ಯಕ ಕಲಾ ಸಂಗಮ

ಜಗತ್ತೇ ಕರೋನ ಮಹಾಮಾರಿಯಿಂದ ಬಳಲಿ ಸುಸ್ತಾಗಿರುವಾಗ ಯುಕೆ ಹವ್ಯಕರನ್ನು ಹುರಿದುಂಬಿಸಲು ಆಯೋಜನ ಸಮಿತಿ ಈ ಬಾರಿ ಐದನೇ ವರ್ಷದ ಪ್ರಯುಕ್ತ ಒಂದು ವಿಶೇಷ ಕಾರ್ಯಕ್ರಮ ಹವ್ಯಕ ಕಲಾ ಸಂಗಮವನ್ನು ಹಮ್ಮಿಕೊಂಡಿದೆ.

೨೦೧೫ ರಲ್ಲಿ ಹಲವು ಪರಿವಾರಗಳಿಂದ ಶುರುವಾದ ಹವ್ಯಕ ಬಳಗ ಯುನೈಟೆಡ್ ಕಿಂಗ್ಡಮ್ ಇವತ್ತು ೧೦೦ ಕ್ಕೂ ಹೆಚ್ಚು ಪರಿವಾರದ ಸದಸ್ಯತ್ವವನ್ನು ಪಡೆದಿದೆ. ಇಂದು ಹವ್ಯಕ ಬಂಧು ಭಾಂಧವರು ಯುನೈಟೆಡ್ ಕಿಂಗ್ಡಮ್ (HaBBa UK ) ಎಂದು ಪರಿವರ್ತನೆಗೊಂಡಿದೆ. ಆಂಗ್ಲ ಭಾಷೆಗೂ ಹವ್ಯಕರಿಗೂ ಸಾಕಷ್ಟು ಹೋಲಿಕೆ ಇದೆ. ಯಾಕೆ ಎಂದು ಕೇಳ್ತೀರಾ? ಆಂಗ್ಲ ಭಾಷೆಯಲ್ಲಿ ಎಲ್ಲರಿಗೂ ಒಂದೇ ವಚನದಲ್ಲಿ ಕರೆಯುವದು ಅದೇ ರೀತಿ ಹವ್ಯಕ ಭಾಷೆಯಲ್ಲೂ ಏಕ ವಚನದಲ್ಲೇ ಮನೆಯ ಹಿರಿಯರು ಕಿರಿಯರು ಎಲ್ಲರಿಗೂ ಕರೆಯುವದು. ಹವ್ಯಕ ಪರಿವಾರದಲ್ಲಿ ಅಪ್ಪ, ಆಯಿ, ಅಮ್ಮ, ಅಜ್ಜ, ಅಜ್ಜಿ ಎಲ್ಲಾ ಒಂದೇ! ಎಲ್ಲರಿಗೂ ಏಕ ವಚನದಲ್ಲೇ ಕರೆಯುವುದು ಸಾಮಾನ್ಯ. ಈ ಬಾರಿ ಆಂಗ್ಲ ನಾಡಿನಲ್ಲಿರುವ ಹವ್ಯಕರು ಜೂಮ್ ಎಂಬ ತಂತ್ರ್ಯಾಂಶದ ಮೂಲಕ ನಮ್ಮ ತಾಯ್ನಾಡಿನ ಹವ್ಯಕ ಕಲಾವಿದರನ್ನೊಟ್ಟುಗೂಡಿಸಿ ಒಂದು ಸುಂದರವಾದ ಹವ್ಯಕ ಕಲಾ ಸಂಗಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಮರಳ ಮೇಲೆ ಸೊಗಸಾಗಿ ಚಿತ್ರ ಬಿಡಿಸುವ ಮರಳು ಕಲೆ ಪರಿಣಿತ ಮತ್ತು ಈ ಕಲೆಯ ಮೂಲಕವೇ ಸಾಕಷ್ಟು ಖ್ಯಾತಿ ಪಡೆದ ರಾಘವೇಂದ್ರ ಹೆಗಡೆ ಜೊತೆ ತಮ್ಮ ಸುಮದುರ ಕಂಠದಿಂದ ಹಾಡಲಿದ್ದಾರೆ ನಮ್ಮ ಗಣೇಶ್ ದೇಸಾಯಿ ಹಾಗೂ ಅರುಂಧತಿ ವಸಿಷ್ಠ. ಇವರ ಜೊತೆಗೆ ತಮ್ಮ ಹವ್ಯಕ ಹಾಸ್ಯದಿಂದ ರಂಜಿಸಲಿದ್ದಾರೆ ಸುಬ್ರಮಣ್ಯ ಹೆಗಡೆ ಅವರು. ಖ್ಯಾತ ಕೊಳಲ ವಾದಕರಾದ ಪ್ರಕಾಶ್ ಹೆಗಡೆ, ತಬಲಾದಲ್ಲಿ ಕಾರ್ತೀಕ್ ಭಟ್ ಹಾಗೂ ಕೀಬೋರ್ಡ್ ನಲ್ಲಿ ವಿಶಾಖ ಜೊತೆ ನೀಡಲಿದ್ದಾರೆ. ಹೀಗೆ ಒಂದೋ ಎರಡೋ, ಸಪ್ತ ಹವ್ಯಕ ಕಲಾವಿಧರು ಆಂಗ್ಲ ನಾಡಿನಲ್ಲಿ ಅಂತರ್ಜಾಲದ ಮೂಲಕ ಒಂದು ಅತ್ಯುತ್ತಮ ಕಾರ್ಯಕ್ರಮವನ್ನು ನೀಡಲು ಸಜ್ಜಾಗಿದ್ದಾರೆ.
ಈ ಕಾರ್ಯಕ್ರಮ ಆಂಗ್ಲ ನಾಡಿನ ಅಪ್ಪಟ ಹವ್ಯಕರಿಂದ, ಹವ್ಯಕ ಕಲಾವಿದರನ್ನೊಳಗೊಂಡು, ವಿಶ್ವದಲ್ಲಿರುವ ಹವ್ಯಕ ಹಾಗೂ ಎಲ್ಲಾ ಕನ್ನಡಿಗರಿಗೋಸ್ಕರ ಹಮ್ಮಿಕೊಂಡಿರುವ ಒಂದು ಉತ್ತಮ ಪರಿಕಲ್ಪನೆ.
ಕೂಡಲೇ ನೋಂದಾಯಿಸಿ. ಜೂಮ್ ಲಿಂಕ್ ಇಮೇಲ್ ಮೂಲಕ ಪಡೆಯಿರಿ, ಮರೀದೆ ಬನ್ನಿ.

Comments

comments