ಕರುನಾಡ ಯುಕೆ ಕನ್ನಡಿಗರ ಯುಗಾದಿಗೆ ಪೆಟ್ಟು ಕೊಟ್ಟ ಕರೋನ ವೈರಸ್

ನಮಸ್ಕಾರ ಸ್ನೇಹಿತರೇ.
ಯುಗಾದಿ ಹಬ್ಬಕ್ಕೆ ಇನ್ನೇನು ಕೇವಲ ಎರಡು ವಾರಗಳಿವೆ. ೨೦೧೯, ನವೆಂಬರ್ ದೀಪಾವಳಿ ಹಾಗೂ ರಾಜ್ಯೋತ್ಸವ ಮುಗಿದಾಗಿನಿಂದ ನಮ್ಮ ಯುಕೆ ಕನ್ನಡಿಗರು ಯುಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಕನ್ನಡ ಬಳಗ, leicester ಕನ್ನಡ ಪರಿವಾರ, scottish ಕರ್ನಾಕಟ ಸಂಘ, Orpington ಕನ್ನಡ ಆರಂಭ, swindon ಕನ್ನಡ ಬಳಗ, ಮ್ಯಾಂಚೆಸ್ಟರ್ ಕನ್ನಡ ಸಂಘ, ಹ್ಯಾರೋ ಕನ್ನಡ ಕುವೆಂಪು, ಬರ್ಮಿಂಗ್ಹ್ಯಾಮ್ ಕನ್ನಡಿಗರು, cardiff ಕನ್ನಡಿಗರು ಹೀಗೆ ಹಲವಾರು ಕರುನಾಡ ಯುಕೆ ಕನ್ನಡಿಗರು ಈ ಬಾರಿ ವಿಶಿಷ್ಟ ರೀತಿಯಲ್ಲಿ ಯುಗಾದಿ ಆಚರಣೆಗೆ ಸಜ್ಜಾಗಿದ್ದುದಲ್ಲದೇ, ಹಲವರು ಕರ್ನಾಟಕದಿಂದ ಖ್ಯಾತ ಪ್ರತಿಭೆಗಳನ್ನೂ ಆವ್ಹಾನಿಸಿದ್ದುದು ನಮಗೆ ಗೊತ್ತೇ ಇದೆ.

ಆದರೆ ಚೀನಾದಲ್ಲಿ ಡಿಸೆಂಬರ್ ನಲ್ಲಿ ಶುರುವಾದ ಕರೋನ ವೈರಸ್, ಯುಕೆ ಹಾಗೂ ಇತರ ಯುರೋಪ್ ದೇಶಗಳಲ್ಲಿ ಹರಡಿ ಅಪಾಯ ಮಾಡಬಹುದು ಎಂಬ ಶಂಕೆ ಇದ್ದರೂ, ಇಷ್ಟೊಂದು ಪ್ರಮಾಣದಲ್ಲಿ ಹರಡುವುದೆಂದು ಗೊತ್ತಿರಲಿಲ್ಲ. ಪ್ರವಾಸಿಗರ ಸ್ವರ್ಗ ಇಟಲಿಯಲ್ಲಿ ಕೊರೋನಾ ವೈರಸ್ ಗೆ ಹಲವರು ಮಂದಿ ಬಲಿಯಾಗಿದ್ದು ಸಧ್ಯದಲ್ಲಿ ಇದು ಯುಕೆಗೆ ದೊಡ್ಡ ದಕ್ಕೆ ಕೊಟ್ಟಿದೆ.

ಮಾರ್ಚ್ ೮ ರಂದು KUK Talkies ಹಮ್ಮಿಕೊಂಡಿದ್ದ ಮೊದಲ ಕಾರ್ಯಕ್ರಮ ಖ್ಯಾತ ನಟ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಭಾಗವಹಿಸುವ ಸಿನಿಮಾ ಶಿವಾಜಿ ಸುರತ್ಕಲ್ ಪ್ರೀಮಿಯರ್ ಈಗಾಗಲೇ ರದ್ದಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿತ್ತು. ೨೦೦ ಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿತ್ತು, ಶನಿವಾರ ೭ ನೇ ಮಾರ್ಚ್ ವಿಶೇಷ ಡಿನ್ನರ್ ಕೂಡ ಬುಕ್ ಆಗಿತ್ತು. ರಮೇಶ್ ಹಾಗೂ ಶ್ರೀವತ್ಸ ಅವರ flight ಟಿಕೆಟ್ ಕೂಡ ಬುಕ್ ಆಗಿತ್ತು.

ಮೊದಲ್ನೇ shock film industry ಗೆ ಬಂದಿದ್ದು, ಜೇಮ್ಸ್ ಬಾಂಡ್ ಅವರ “ನೋ ಟೈಮ್ ಟು ಡೈ” ಸಿನಿಮಾ ನವೆಂಬರ್ ಗೆ ಮುಂದೂಡಿದ್ದು.. ಹೀಗೆಯೇ ಕರ್ನಾಟಕದಿಂದ ಹಲವರು tech ಕಂಪನಿ ಗಳು ಟ್ರಾವೆಲ್ ಬ್ಯಾನ್ ಮಾಡಿದ್ದು, ಇದಲ್ಲದೇ ಯುರೋಪ್ ನಲ್ಲಿ ಶೂಟ್ ಆಗಬೇಕಿದ್ದ ಹಲವು ಕನ್ನಡ ಸಿನಿಮಾಗಳು ಕರೋನ ವೈರಸ್ ಕಾರಣದಿಂದ ರದ್ದಾಗಿದ್ದು ನೋ ರಿಸ್ಕ್ ಟು ಫ್ಲೈ ಆಗಿದೆ. ನಿರ್ದೇಶಕ ಆಕಾಶ ಹಾಗೂ ರಮೇಶ್ ಸರ್ ಪ್ರಯಾಣ ಮಾಡೋದು ತುಂಬಾ ರಿಸ್ಕ್ ಆಗಿದೆ ಎಂದಾಗ, ನನಗೆ ನಿರಾಸೆಯಾಗಿತ್ತು ಆದ್ರೆ ಇಷ್ಟೊಂದು ಮೀಡಿಯಾಗಳಲ್ಲಿ ಕರೋನ ವೈರಸ್ ನ್ಯೂಸ್ ಬರುತ್ತಿರುವಾಗ, ಶಿವಾಜಿ ಸುರತ್ಕಲ್ ಪ್ರೀಮಿಯರ್ ಈ ಸಂಧರ್ಭದಲ್ಲಿ ಮಾಡಿ ಎಲ್ಲರನ್ನೂ ಅಪಾಯಕ್ಕೆ ಸಿಕ್ಕಿಸುವ ಬದಲು ಅದನ್ನು ರದ್ದು ಮಾಡುವದೇ ಉಚಿತ ಎಂದು ಅನ್ನಿಸಿತು. ಮುಂದೆ ನಮ್ಮ ದುರಾದ್ರಷ್ಟಕ್ಕೆ ಏನಾದರೂ ಆದರೆ, ನಮ್ಮಂಥ ಚಿಕ್ಕ ಸಂಸ್ಥೆಗಳಿಗೆ ಯಾರೂ ಸಹಾಯಕ್ಕೆ ಬರುವದಿಲ್ಲ. ಹೀಗಾಗಿ ಸಿನಿಮಾ ಪ್ರದರ್ಶನ ಹಾಗೂ ಡಿನ್ನರ್ ಕಾರ್ಯಕ್ರಮ ರದ್ದು ಮಾಡಲಾಯಿತು.

ಈ ಮದ್ಯ ಕನ್ನಡ ಬಳಗ ಕೂಡ ಮಾರ್ಚ್ ೨೮ ಕ್ಕೆ ಹಮ್ಮಿಕೊಂಡಿರುವ ಯುಗಾದಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಕನ್ನಡ ಬಳಗ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಜಯಂತ್ ಕೈಕಿಣಿ ಹಾಗೂ ಖ್ಯಾತ ಗಾಯಕಿ ಡಾ| ಶಮಿತಾ ಮಲ್ನಾಡ್ ಬರುವವರಿದ್ದರು. ಮಾರ್ಚ್ ೨೮ ರಂದು ನಡೆಯುವ Orpington ಯುಗಾದಿ ಕೂಡ ರದ್ದಾಗಿದೆ. ಸಂಗೀತ ರಾಜೀವ್ ಅವರ ಮ್ಯೂಸಿಕಲ್ ಬ್ಯಾಂಡ್ Orpington ನಲ್ಲಿ ೨೮ ಮಾರ್ಚ್ ಹಾಗೂ ಏಪ್ರಿಲ್ ೪ ರಂದು swindon ಯುಗಾದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿದ್ದರು.

ಏಪ್ರಿಲ್ ೨೫ ರಂದು leicester ನಲ್ಲಿ ಕೂಡ derby ಹಾಗೂ leicester ತಂಡದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆಯೋಜಕರು ಈ ಮಧ್ಯೆ ಕರೋನ ವೈರಸ್ ಹರಡುವ ಅಪಾಯದ ಬಗ್ಗೆ event ಮಾಡುವುದೋ ಅಥವಾ ಬೇಡವೋ ಎನ್ನುವ ನಿರ್ಧಾರ ಸಧ್ಯದಲ್ಲೇ ತೆಗೆದುಕೊಳ್ಳುವವರಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆ, ಕರುನಾಡ ಯುಕೆ ಕನ್ನಡಿಗರ ಯುಗಾದಿಗೆ ದೊಡ್ಡ ಪೆಟ್ಟು ಕೊಟ್ಟ ಕರೋನ ವೈರಸ್ ಹೆಚ್ಚು ಹರಡದೆ, ಮುಂದೆ ಹಲವಾರು ಕನ್ನಡ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡಲಿ ಎಂದು ಆಶಿಸೋಣ!

Comments

comments