ಕನ್ನಡಾಂಬೆಗೆ ಸಂಗೀತ ಸೇವೆ

ಕನ್ನಡ ನಾಡಿನ ಜೀವನಾಡಿ ಕಾವೇರಿ … ಓಹೋ ಜೀವನದಿ… ಈ ಕಾವೇರಿ..ಅನ್ನವ ನೀಡುವ ದೇವನದಿ ಈ ವಯ್ಯಾರಿ .. ಅರ್.ಏನ್. ಜಯಗೋಪಾಲ್ ಅವರ ಸಾಹಿತ್ಯ ಹಾಗೂ ದಿವಂಗತ ಎಸ.ಪಿ. ಬಾಲಸುಭ್ರಮಣ್ಯಮ್ ಅವರ ಈ ಗೀತೆಯ ಮೂಲಕ ಯುಕೆ ಕನ್ನಡತಿಯಾದ ಗಾಯಕಿ ಡಾ. ಶ್ವೇತಾ ಹಿರೇಮಠ್ ಅವರು ಕನ್ನಡಿಗರುಯುಕೆ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ೨೦೨೧ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲಾ ಸಭಿಕರನ್ನು ಕಾವೇರಿಯನ್ನು ಮನಸ್ಪೂರಕವಾಗಿ ಸ್ಮರಿಸುವನಂತೆ ಮಾಡಿದರು. ಈ ಹಾಡಿನ ನಂತರ ಯುಕೆ ಕನ್ನಡತಿಯಾದ ಇನ್ನೊಬ್ಬ ಖ್ಯಾತ ಗಾಯಕಿ ಲಕ್ಷ್ಮೀ ಹೊಯ್ಸಳ ಅವರು ಕರುನಾಡ ತಾಯಿ ಸದಾ ಚಿನ್ಮಯಿ, ಈ ಪುಣ್ಯ ಭೂಮಿ ನಮ್ಮ ದೇವಾಲಯ, ಪ್ರೇಮಾಲಯ ಈ ದೇವಾಲಯ ಎಂಬ ಅದ್ಭುತವಾದ ನಮ್ಮೆಲ್ಲರ ಹೆಮ್ಮೆಯ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದರು. ಅದಾದ ಮೇಲೆ ಇಲ್ಲಿಯೇ ಲಂಡನ್ ನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾದ ಹರ್ಷಿತಾ ಅವರು ಹಂಸಲೇಖ ಅವರ ಸಂಗೀತದ ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ, ಕನ್ನಡ ನುಡಿ… ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ ಗೀತೆಯನ್ನು ಹಾಡಿದರು..
ಹಾಡಿಗೆ ಅಷ್ಟೇ ಉತ್ಸಾಹದಿಂದ ನೆರೆದಿದ್ದ ಎಲ್ಲಾ ಕನ್ನಡಿಗರು ಹರ್ಷ ಭರಿತ ಹೆಜ್ಜೆಗಳೊಂದಿಗೆ ಹೆಜ್ಜೆ ಹಾಕಿ ಆನಂದಿಸಿದರು.
ಡಾ. ಶ್ವೇತಾ ಹಿರೇಮಠ್, ಲಕ್ಷ್ಮೀ ಹೊಯ್ಸಳ ಹಾಗೂ ಹರ್ಷಿತಾ – ಈ ಮೂವರು ನಮ್ಮ ಈ ಬಾರಿಯ ಕನ್ನಡಿಗರುಯುಕೆ ಕನ್ನಡ ರಾಜ್ಯೋತ್ಸವದ ಅಪ್ರತಿಮ ಪ್ರತಿಭೆಗಳು.

ಕನ್ನಡ ನಾಡಿನ ಜೀವನಾಡಿ ಕಾವೇರಿ – ಡಾ. ಶ್ವೇತಾ ಹಿರೇಮಠ್

ಕರುನಾಡ ತಾಯಿ ಸದಾ ಚಿನ್ಮಯಿ – ಲಕ್ಷ್ಮೀ ಹೊಯ್ಸಳ

Comments

comments