ನವೋದಯನ್ಗಳೊಂದಿಗೆ “ನವ” ಉದಯ ಇದು ಆಂಗ್ಲನಾಡಿನ ಅಧ್ಯಾಯ

ನಮಸ್ಕಾರ ಸ್ನೇಹಿತರೆ…!!
ಎಂದಿನಂತೆ ಮತ್ತೊಂದು ಮೈ ನವಿರೆಳಿಸಿದ, ನರನಾಡಿಯಲ್ಲಿ ಮಿಂಚನ್ನ ಸಂಚರಿಸುವಂತೆ ಮಾಡಿದ ಅನುಭವದೊಂದಿಗೆ ಮುಕ್ತಾಯಗೊಂಡ ನೆನ್ನೆಯ ದಿನ ನನ್ನ ಜೀವನದ ದಿನಚರಿಯ ಪುಟಗಳಲ್ಲಿ ಮಹತ್ತರವಾದ ಇನ್ನೊಂದು ಪುಟವೆಂದರೆ ತಪ್ಪಾಗಲಾರದೆನೊ.
ಎತ್ತಣ ಮಾಮರ
ಎತ್ತಣ ಕೋಗಿಲೆ ?
ಎತ್ತಣಿಂದೆತ್ತ ಸಂಬಂಧವಯ್ಯ ?!
ಬೆಟ್ಟದ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ ?!
ಮೇಲಿನ ವಚನದ ಸಾಲುಗಳಲ್ಲಿ ಹೆಳಿದಂತೆ
ಇದೆನಪ್ಪಾ ಗೋವರ್ಧನ ಗೂ ನವೋದಯಕ್ಕು “ನವೋದಯನ್” ಗಳಿಗೂ ಎನಪ್ಪಾ ಸಂಬಂಧ ಅಂತಾ ತಲೆ ಕೆರೆಯುವುದಾದರೆ…ಆ ಸಂಬಂಧ ಅಂದಾಜು ಮೂವತ್ತು ಅಥವಾ ಮೂವತ್ತೆರಡು ವರ್ಷಗಳಹಿಂದಿನ ನನ್ನ ತಂದೆತಾಯಿಯ ಅಸ್ಪಷ್ಟ ಕನಸ್ಸೆಂದಷ್ಟೆ ಹೆಳಬಹುದು. ಅಂದು ಕರ್ನಾಟದಲ್ಲೆ ಅತ್ಯೆಂತ ಹಿಂದುಳಿದ ಪ್ರದೇಶವೆಂದು ಘೋಶಿಸಲ್ಪಟ ಹಾಗೂ ನನ್ನ ಹುಟ್ಟೂರಾದ ದೇವದುರ್ಗದಲ್ಲಿ ಬಿಟ್ಟುಬಿಡದೆ ಬೆಳಗಿನ ಜಾವ, ಸಾಯಂಕಾಲ ಎನ್ನದೆ ನನ್ನ ಅಚ್ಚು ಮೆಚ್ಚಿನ ಶಿಕ್ಷಕರಾದ “ದಂಡಪ್ಪ.ಹೆಚ್” ಸರ್ ಅವರ ಮನೆಗೆ ತರಬೇತಿಗಾಗಿ ಅಲೆದಾಡಿದ್ದು, “ಎಮ್.ಬಿ.ಡಿ” ಎನ್ನುವ ಮಾರ್ಗದರ್ಶಿ ಪುಸ್ತಕವನ್ನು ಬಿಟ್ಟು ಬಿಡದೆ ಓದಿದ್ದು, ಹೊಸ ಮುಖ, ಮುಖಿಗಳ ಪರಿಚಯವಾಗಿದ್ದು ಮರೆಯಲು ಸಾದ್ಯವೇ…?ಅಂದು ಆ ಕನಸು ಕಾರಣಾಂತರಗಳಿಂದಲೊ ಅಥವ ಸ್ವಯಂಕೃತ ಅಪರಾಧದಿಂದಲೊ ಅಳಿಸಿಹೋಗಿ, ಸರ್ಕಾರಿ ಶಾಲೆಯಲ್ಲಿ ಮುಂದುವರಿದ ಪಯಣ ಹಲವಾರು ಸವಾಲುಗಳೊಂದಿಗೆ ಮುಗಿದು ಜೀವನದಲ್ಲಿ ಒಂದು ಮಟ್ಟಕ್ಕೆ ಬರುವಲ್ಲಿ ದಶಕಗಳೆ ಕಳೆದು ಹೊಯಿತು ಎಂದಷ್ಟೆ ಹೆಳಬಹುದು.ಸರಿಸುಮಾರು ೧೮ ಅಥವಾ ೨೦ ವರ್ಷಗಳಹಿಂದೆ ಕಾಲೇಜಿನಲ್ಲಿದ್ದಾಗ ಕೆಲ ನವೋದಯನ ಸ್ನೇಹಿತರು ರಜೆಗಾಗಿ ಬಂದಾಗ ಅಲ್ಲಿನ ವರ್ಣರಂಜಿತ ಕಳಥೆಗಳನ್ನು ಅವರುಗಳು ಹೆಳುತ್ತಿದ್ದಾಗ ಒಮ್ಮೊಮ್ಮೆ ನನಗೆ ಅಂತಹ ಅವಕಾಶ ಒದಗಿಬರದಿದ್ದಕ್ಕಾಗಿ ಖೆದವಾಗಿದ್ದುಂಟು, ಆದರೆ ಅದು ನಮ್ಮ ಪರಿಮೀತಿಯ ಹೊರಗಿನದ್ದು ಎಂದುಕೊಂಡು ಸಮಾಧಾನವನ್ನು ಮಾಡಿಕೊಂಡದ್ದುಂಟು.
ಅದು ಹೇಗೋ ಎರಡು ವರುಷಗಳ ಹಿಂದೆ ಮತ್ತೊಮ್ಮೆ ನವೊದಯನ್ Padmaja KVS ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂದು ಅಲ್ಲಿಂದ ಶುರುವಾದ ಅವರೊಟ್ಟಿಗಿನ ಸ್ನೇಹದ ಪ್ರಯಾಣ ಎರಡು ವರ್ಷಗಳಲ್ಲಿ ನನ್ನನ್ನು ಇನ್ನೊಬ್ಬ ನವೋದಯನ್ ಎನೋ ಅನ್ನುವಷ್ಟರ ಮಟ್ಟಿಗೆ ಬೆಳದದ್ದು ಮಾತ್ರ ನಂಬಲಸಾದ್ಯ..ಅವರ ನವೋದಯನ್ ಸಂಪರ್ಕಜಾಲದಿಂದ ಪರಿಚಯವಾದ Ganapati Bhat ಮತ್ತು Nanjund Bhat ವೀಶೆಷವಾಗಿ ಅವರೊಂದಿಗಿನ ಒಡನಾಟ ಇಂದು ನನಗೆ ಹಲವಾರು ಯುಕೆ ಕನ್ನಡಿಗರನ್ನು ಪರಿಚಯಿಸಿದೆ ಎಂದು ಹೆಳಿದರೆ ತಪ್ಪಾಗಲಾರದು.


ನವೋದಯನ್ ಅವರೊಂದಿಗಿನ ನನ್ನ ಎರಡು ವರ್ಷಗಳ ಪರಿಚಯ ಮತ್ತು ಒಡನಾಟ ಇಂದು ಅವರು ಎರ್ಪಡಿಸಿದ್ದ ಕಾರ್ಯಕ್ರಮಕ್ಕೆ ನನ್ನನ್ನು ಅವರು ತಮ್ಮ ವಿಸ್ಮಯ ಜಗತ್ತನ್ನು ತುಂಬಾ ಹತ್ತಿರದಿಂದ ನೋಡಲು ಆಹ್ವಾನಿಸಿದಂತಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ನವೋದಯನಗಳು ಹಾಗೂ ಕಾರ್ಯಕ್ರಮದಲ್ಲಿನ ವಾತಾವರಣ ಭಾರತದ ಹೊರಗೊಂದು ಶ್ರೇಷ್ಠ ಭಾರತ ಮತ್ತ ಅದರ ಸರ್ವೋತ್ತಮ ಮೌಲ್ಯಗಳಾದ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಮೌಲ್ಯಗಳನ್ನು ಪ್ರದರ್ಶಿಸುತ್ತಿತ್ತು. ಕೇವಲ “ನವೋದಯ ವಿಧ್ಯಾಲಯ ಸಮಿತಿ” ಯ ಶಾಲಾ ಕಾಲೇಜುಗಳಲ್ಲಿ ವಿಧ್ಯಾಭ್ಯಾಸ ಮಾಡಿರುವದೊಂದೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೇಕಾದ ಅರ್ಹತೆಯಾಗಿತ್ತಾದರು ನನ್ನನ್ನು ಅವರಲ್ಲಿ ಒಬ್ಬರಂತೆ ಪರಿಗಣಿಸಿದ್ದು ನನಗೆ ಹೆಮ್ಮೆಯ ಸಂಗತಿ. ಹಲವಾರು ಸಹೃದಯಿ ನವೋದಯನ ಸ್ನೇಹಿತ ಸ್ನೇಹಿತೆಯರು ಸಂಸಾರ ಸಮೇತರಾಗಿ ಭಾಗವಹಿಸಿ, ಸಂಸ್ಥೆಯಿಂದ ಅವರು ಪಡೆದ ಕೇವಲ ಎಳು ವರ್ಷಗಳ ಮೌಲ್ಯಾದಾರಿತ ಶಿಕ್ಷಣದ ಭವ್ಯ ಬುನಾದಿಯ ಮೇಲೆ ತಮ್ಮ ತಮ್ಮ ಯಶಸ್ಸಿನ ಸೌಧವನ್ನು ಕಟ್ಟಲು ಅದಕ್ಕೆ ಬೆಕಾದ ಇಟ್ಟಿಗೆಯನ್ನು ಹೊಂದಿಸಿಕೊಳ್ಳಲು ಪಟ್ಟ ಶ್ರಮ ಮತ್ತು ಅವರವರು ಕಲಿತ ಸಂಸ್ಥೆಯಲ್ಲಾದ ಅವರ ಅನುಭವವನ್ನು ಹಂಚಿಕೊಳ್ಳುತ್ತಿದ್ದರೆ ಇನ್ನುಳಿದವರ ಮುಖದಲ್ಲಿ ಅರಳುತ್ತಿದ್ದ ಹರ್ಷ,ಮೂಡುತ್ತಿದ್ದ ಅಭೀಮಾನ ವರ್ಣಿಸಲಸಾಧ್ಯವೆಂದರೆ ಅತಿಶಯೋಕ್ತಿಯಾಗಲಾರದೆನೋ. ಇವುಗಳೆಲ್ಲದರ ಮಧ್ಯ ತಮ್ಮ ತಮ್ಮ ಸಂಸ್ಥೆಗಳಲ್ಲಿ ಇನ್ನೂ ಸರಿಪಡಿಸಲಾಗದ ಲೋಪದೋಶಗಳಬಗ್ಗೆ, ವೃತ್ತಿರಂಗದಲ್ಲಿನ ಅನುಭವದ ಆಧಾರದ ಮೇಲೆ ಅವರವರ ಕ್ಷೇತ್ರದಲ್ಲಿ ಭಾರತದಲ್ಲಿಗೂ ಮತ್ತು ಇಲ್ಲಿಗೂ ಇರುವ ವ್ಯೇತ್ಯಾಸ, ಜನರ ಮನಸ್ಥಿತಿಯಲ್ಲಾಗಬೆಕಾದ ಬದಲಾವಣೆಗಳ ಬಗ್ಗೆ ಚರ್ಚಿಸುತ್ತಿದ್ದರೆ, ಅದರೊಂದಿಗೆ ನವೋದಯನ್ ಸಂಪರ್ಕಜಾಲದ ವ್ಯಾಪ್ತಿಯನ್ನು ಗಮನಿಸಿದರೆ, ಖಂಡಿತವಾಗಿಯು ವಿಶ್ವವೆ ಭಾರತದತ್ತ ತಿರುಗಿನೋಡುವಂತೆ ಹಾಗೂ ಭಾರತವನ್ನು ಬಲಾಢ್ಯ ವನ್ನಾಗಿಸುವ, ವಿಶ್ವಗುರುವನ್ನಾಗಿ ಬದಲಾಯಿಸಬಹುದಾದಂತಹ ಬಲವಾದ ಶಕ್ತಿ ಹಾಗೂ ಅಂತಹ ಶಕ್ತಿಯನ್ನು ತುಂಬಬಲ್ಲ ಬಲವಾದ ಕೈಗಳು ಅದೆಲ್ಲೊ ಮೂಲೆ ಮೂಲೆಗಳಲ್ಲಿ ಬಿಡಿ ಬಿಡಿಯಾಗಿ ಕುಳಿತವುಗಳನ್ನು ಒಂದೆಡೆಗೆ ಸೇರಿಸಿವಲ್ಲಿ “ಆಲ್ ಇಂಡಿಯಾ ಜವಹರ್ ನವೋದಯ ವಿಧ್ಯಾಲಯ ಸಮಿತಿ ಅಲುಮನಿ ಅಸೋಸಿಯೇಷನ್ (AIJAA)” ಮಾಡುತ್ತಿರುವ ಕೆಲಸ ಮತ್ತು ಪಡುತ್ತಿರುವ ಶ್ರಮ ಇಂದಲ್ಲಾ ನಾಳೆ ಒಳ್ಳೆಯ ಫಲ ಕೊಟ್ಟೆ ಕೊಡುತ್ತದೆ ಎನ್ನುವುದು ನನ್ನ ನಂಬಿಕೆ.
ಅದರೊಂದಿಗೆ ಭಾರತದಲ್ಲಿ ಕೆಲವೆ ಕೆಲವು ಸರ್ಕಾರಿ ಸ್ವಾಮ್ಯದ ಸ್ವಾಯತ್ಯ ವಿಧ್ಯಾಸಂಸ್ಥೆಗಳಲ್ಲಿ ಒಂದಾದ ಮತ್ತು ವೀಶೆಷ ಸ್ಥಾನಮಾನ ಹೊಂದಿರುವ “ನವೋದಯ ವಿಧ್ಯಾಲಯ ಸಮಿತಿ” ಕಳೆದ ಮುವತ್ತೈದು ವರ್ಷಗಳಿಂದ ನಿರಂತರವಾಗಿ ತಮ್ಮ ಸಂಸ್ಥೆಯ ಮೂಲಕ ಲಕ್ಷ ಲಕ್ಷಗಳಲ್ಲಿ ಭಾರತದ ಒಳಗೆ ಹಾಗೂ ಹೊರಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿನಿಧಿಸುವಂತಹ ಪ್ರತಿಭಾವಂತರನ್ನು ಕೊಟ್ಟು ಮಾದರಿಯಾಗಿ ನಿಂತಿದ್ದರು, ಹಲವಾರು ರಾಜ್ಯಗಳಲ್ಲಿ ಸ್ಥಳಿಯ ಸರ್ಕಾರಿ ಸ್ವಾಮ್ಯದ ಶಾಲಾ ಕಾಲೇಜುಗಳು ಅದೇಕೊ ಸದ್ದು ಗದ್ದಲವಿಲ್ಲದೆ, ಕಲೆಯಲು ವಿದ್ಯಾರ್ಥಿಗಳು ಬಾರದೆ ಕರಗಿ ಹೋಗುತ್ತಿರುವುದ ಮಾತ್ರ ವಿಶಾದನೀಯ.
ಸಾಧ್ಯವಾದರೆ ರಾಜ್ಯ ಸರ್ಕಾರಗಳು ಇಂತಹ ಸಂಸ್ಥೆಗಳನ್ನು ಮಾದರಿಯಾಗಿಟ್ಟುಕೊಂಡು ತಮ್ಮ ಶಾಲಾ ಕಾಲೇಜುಗಳನ್ನು ಅವುಗಳ ಮಾದರಿಗೆ ಮಾರ್ಪಡಿಸಿ ಹೆಚ್ಚು ಹೆಚ್ಚಿನ ಮೌಲ್ಯಾದಾರಿತ ಮತ್ತು ಗುಣಮಟ್ಟದ ಶಿಕ್ಷಣ ಕೊಡುವುದರ ಕಡೆ ಗಮನ ಹರಿಸಿದಲ್ಲಿ ತಕ್ಕಮಟ್ಟಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಪಾಲಕರು ಮುಖ ಮಾಡುವುದನ್ನು ತಡೆಗಟ್ಟಬಹುದೆನೋ.
ಧನ್ಯವಾದಗಳೊಂದಿಗೆ…
-ಗೋವರ್ಧನ ಗಿರಿ ಜೋಷಿ

Comments

comments