ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದಿಂದ ಆಗುವ ಆರ್ಥಿಕ ಪರಿಣಾಮವು ಮುಂದಿನ ದಿನಗಳಲ್ಲಿ ಈ ಘರ್ಷಣೆಯು ಎಷ್ಟು ಕಾಲ ಮುಂದುವರೆಯಬಹುದು ಎಂಬುದರ ಮೇಲೆ ಅವಲಂಬಿಸಿರುತ್ತದೆ. ಈಗಾಗಲೇ ರಷ್ಯಾದ ಮೇಲೆ ಹೇರಿರುವ ನಿರ್ಬಂಧನೆಗಳ ತೀವ್ರತೆಯು ಯುನೈಟೆಡ್ ಕಿಂಗ್ಡಮ್ ಮೇಲೆ ಕೂಡ ಪರಿಣಾಮ ಬೀರುತ್ತವೆ ಎಂಬುದರ ಮೇಲೆ ಸಂದೇಹವೇ ಇಲ್ಲ. ಯುರೋಪ್ ರಫ್ತು ಮಾಡಿಕೊಳ್ಳುವ ಅನಿಲದ ಬೆಲೆಗಳು ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಸೂಚಿಸಿದಂತೆ ವಿಕಸನಗೊಂಡರೆ ಮತ್ತು ಅದರ ಪೂರೈಕೆಗೆ ಯಾವುದೇ ಅಡ್ಡಿಯಿಲ್ಲ ಎಂದು ನಾವು ಊಹಿಸಿದರೆ, ಯುಕೆ ಆರ್ಥಿಕತೆಯ ಮೇಲೆ ಪರಿಣಾಮವು ಸ್ವಲ್ಪ ಕಡಿಮೆ ಇರಬಹುದು ಆದರೂ ಈ ಯುದ್ಧದ ಪ್ರಭಾವ ಸಾಮಾನ್ಯರಿಗೆ ತಟ್ಟುವದಂತೂ ನಿಜ. ಆಕ್ಸ್ಫರ್ಡ್ ಅರ್ಥಶಾಸ್ತ್ರಜ್ಞರ ಪ್ರಕಾರ ಈಗಾಗಲೇ ಏರುತ್ತಿರುವ ವಿದ್ಯುತ್ ಮತ್ತು ಗ್ಯಾಸ್ ಬೆಲೆಗಳು 2022 ರಲ್ಲಿ ಹಣದುಬ್ಬರವನ್ನು ಸರಾಸರಿ 6.5% ಗೆ ಏರಬಹುದು ಮತ್ತು ಏಪ್ರಿಲ್ನಲ್ಲಿ ಗರಿಷ್ಠ 8% ಮೀರಲಿದೆ ಎನ್ನಲಾಗುತ್ತದೆ.
Read more