ತಾಳಿದವನು ಬಾಳಿಯಾನು

ಸ್ನೇಹಿತರೇ, ನಮಸ್ಕಾರ. ತುಂಬಾ ದಿನಗಳ ನಂತರ ಈ ಒಂದು ಗಾದೆಯ ಬಗ್ಗೆ ಬರೆಯುತ್ತಿದ್ದೇನೆ. ಈ ಕೋವಿಡ್ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ತಾಳ್ಮೆ ಹೊರತು ಹೋಗಿದೆಯಾ ಎಂಬ ಸಂದೇಹ ನನ್ನನ್ನು ಸದಾ ಕಾಡುತ್ತಿತ್ತು. ಎಂಥಾ ಪ್ರಾರಬ್ಧ ಅಲ್ಲವೇ? ಎಷ್ಟೊಂದು ಜನರಿಗೆ ಮನೆಯಲ್ಲಿ ಕುಳಿತು ಏನು ಮಾಡೋದು ಏನು ಬಿಡೋದು ಎಂದು ತಲೆ ಬಿಸಿ ಆಗುತ್ತಿರುವುದು ಸಾಮಾನ್ಯವಾಗಿದೆ.

ಸಾಕಷ್ಟು ಜನ ತಾಳ್ಮೆ ಕಳೆದುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಅಥವಾ ವಾಟ್ಸಪ್ಪ್ ಗುಂಪುಗಳಲ್ಲಿ ಸದಾ ವಾದ, ನಿಂದನೆ, ಒಬ್ಬರ ಮೇಲೆ ಇನ್ನೊಬ್ಬರು ಕತ್ತಿ ಮಸೆದು ಜಗಳ ಕಾಯುವದನ್ನು ಇತ್ತೀಚೆಗೆ ನೋಡುತ್ತಿದ್ದೇನೆ. ಹೀಗಿರುವಾಗ ನಮ್ಮ ತಾಳ್ಮೆ ಎಲ್ಲಿ ಹೋಗಿದೆ ಎಂಬುದು ಅರಿವಾಗುತ್ತಿಲ್ಲ.

ತಾಳ್ಮೆಗಿಂತ ಮುಖ್ಯವಾದ ಗುಣ ಬೆರಾವುದೂ ಇಲ್ಲ. ತಾಳ್ಮೆ ಇದ್ದರೆ ನಾವೇನಾದರೂ ಸಾಧಿಸಬಹುದು.
ಬಾಳೊಂದು ದೋಣಿ. ತಾಳ್ಮೆಯೇ ಅದನ್ನು ಸರಿಯಾದ ಪಥದಲ್ಲಿ ಕರೆದುಕೊಂಡು ಹೋಗುವ ಶಕ್ತಿ. ತಾಳ್ಮೆ ನಮ್ಮ ಶಕ್ತಿಯಾಗಿದ್ದರೆ ನಾವು ಯಾವ ಯುದ್ಧವನ್ನೂ ಗೆಲ್ಲಬಹುದು. ನಾವು ಗೆಲುವನ್ನು ಸಾಧಿಸಬೆಕಾದಾರೆ ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ.

ನಾವು ಮಾಡಿದ ಕೆಲಸದ ಪ್ರತಿ ಫಲ ನಮಗೆ ತಕ್ಷಣ ದೊರಕದು. ಫಲವಿಲ್ಲವೆಂದು ಪ್ರಯತ್ನವನ್ನೆ ಬಿಟ್ಟರೆ? ಫಲ ಕೈಗೂಡುವವರೆಗೆ ಸಹನೆಯಿಂದ ಕಾಯುವುದೇ ಪ್ರಮುಖವಾದುದು. ರಾತ್ರೋ ರಾತ್ರಿ ಶ್ರೇಯಸ್ಸು ನಮ್ಮ ಕೈಗೆ ಬರುವುದಿಲ್ಲ. ಹೀಗಾಗಿ ತಾಳ್ಮೆ ನಮ್ಮ ಬದುಕಿನಲ್ಲಿ ತುಂಬಾ ಮಹತ್ವವಾದುದ್ದು. ತಾಳ್ಮೆ ತಪ್ಪಿ ಕೆಟ್ಟಮಾತುಗಳನ್ನು ಆಡಿದರೆ ಅದರಿಂದ ಕೆಟ್ಟದ್ದೇ ನಡೆಯುತ್ತದೆ. ಮಹಾಭಾರತದಲ್ಲಿ ದುರ್ಯೋಧನನಿಗೆ ಆಗಿದ್ದು ಅದೇ, ತಾಳ್ಮೆ ಇಲ್ಲದೇ ತನ್ನ ಅಹಂಕಾರದಿಂದ ಅಧರ್ಮದ ದಾರಿ ಹಿಡಿದು ಕೌರವರ ಅಂತ್ಯವಾಗಿದ್ದನ್ನು ನಾವೆಲ್ಲ ಓದಿದ್ದೇವೆ.

ಈ ಕಾಲದಲ್ಲಿ ತಾಳ್ಮೆ ಎನ್ನುವುದು ವಿರಳ. ಆದರೆ, ಈಗಿನ ಕೆಲವು ಜನರಿಗೆ Instant fame ಬೇಕು. ಸುಳ್ಳಿನ ಗೋಪುರವನ್ನು ಕಟ್ಟಿ ರಾಜ್ಯವಾಳಬೇಕು. ಆದರೆ ಆ ಗೋಪುರದ ತಳಪಾಯ ಗಟ್ಟಿಯಿಲ್ಲದಿದ್ದರೆ, ಗೋಪುರ ಬೀಳುವುದಂತೂ ಖಚಿತ.

ಒಬ್ಬ ರೈತ ಬೀಜ ಬಿತ್ತಿ, ನೀರು ಕೊಟ್ಟು, ಗಿಡದಲ್ಲಿ ಹಣ್ಣುಗಳು ಬೆಳೆದ ಮೇಲೂ ಆ ಹಣ್ಣು ಮಾಗುವವರೆಗೆ ತಾಳ್ಮೆಯಿಂದ, ಸಹನೆಯಿಂದ ಕಾಯಬೆಕಾಗುತ್ತದೆ. ಅಷ್ಟು ಸಮಯ ಕಾಯಲಾಗದೆಂದು ಚಿಗುರು ಹಣ್ಣನ್ನು ಕಿತ್ತರೆ, ಅದು ಸಿಹಿಯು ಇರದರೆ, ರುಚಿಯು ಇರದು. ಅದ್ದರಿಂದಲೇ ‘ತಾಳ್ಮೆಯಿದ್ದವನು ಒಳ್ಳೆಯ ಬಾಳನ್ನು ಬಾಳುತ್ತಾನೆ’ ಎಂದು ಈ ಗಾದೆ ಘೊಷಿಸುತ್ತದೆ.

Patience is a virtue ಅನ್ನುವಂತೆ, ನಾವೆಲ್ಲ ನಮ್ಮ ದಿನ ನಿತ್ಯದ ಕಾರ್ಯದಲ್ಲಿ ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಬಹು ಮುಖ್ಯವಾಗಿದೆ.

Comments

comments