UKಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಿನಿಮಾ

ಸ್ನೇಹಿತರೇ ನಮಸ್ಕಾರ!
ಹೇಗಿದೀರಾ? ಇಂಗ್ಲೆಂಡ್ ನಲ್ಲಿ ಈವಾಗ ಸಮ್ಮರ್ ಮುಗೀತು! ತಾಪಮಾನ ಕಮ್ಮಿ ಆಗಿದೆ, ಮಕ್ಕಳಿಗೆ ಸ್ಕೂಲ್ ಶುರು ಆಗಿದೆ, ಎಲ್ಲರೂ ಒಳ್ಳೆ ರಜಾ ದಿನಗಳನ್ನು ಇಂಡಿಯಾ ಅಥವಾ ಇಲ್ಲೇ ಇಂಗ್ಲೆಂಡ್ / ಸ್ಕಾಟ್ಲೆಂಡ್ ನಲ್ಲಿ ಕಳೆದು ಎಂಜಾಯ್ ಮಾಡಿದೀರಾ ಅಂದ್ಕೊಂಡಿದೀನಿ!

ನನ್ನ ಹಿಂದಿನ ಬ್ಲಾಗ್ ನಲ್ಲಿ GDPR ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆ… ಈ ಬಾರಿ ನಿಮ್ಮೊಂದಿಗೆ ಸದ್ಯಲ್ಲೇ ಬರುವ ಕನ್ನಡ ರಾಜ್ಯೋತ್ಸವ ಹಾಗೂ ನಮ್ಮ ಯು.ಕೆ ಕನ್ನಡಿಗರು ನಿರ್ಮಾಪಿಸುತ್ತಿರುವ ಕನ್ನಡ ಚಲನ ಚಿತ್ರಗಳ ಬಗ್ಗೆ ಆದಷ್ಟು ಮಾಹಿತಿಯನ್ನು ಹಂಚಿಕೊಳ್ಳೋಣ ಅಂತ!

ಇನ್ನೇನು ಆರೇಳು ವಾರದಲ್ಲಿ ಕನ್ನಡ ರಾಜ್ಯೋತ್ಸವ ಬರ್ತಾ ಇದೆ… ದೂರದ ದೇಶದಲ್ಲಿದ್ದು ನಮಗೆಲ್ಲ ಅತಿ ಮುಖ್ಯವಾದದ್ದು ಕನ್ನಡ ರಾಜ್ಯೋತ್ಸವ. ನಿಮಗೆ ಗೊತ್ತಿರುವ ಹಾಗೆ ಕನ್ನಡಿಗರುಯುಕೆ ಸಂಸ್ಥೆ ಕಳೆದ ೧೩ ವರ್ಷಗಳಿಂದ ರಾಜ್ಯೋತ್ಸವನ ಎಲ್ಲರ ಜೊತೆಗೂಡಿ ಆಚರಿಸ್ತಾ ಇದೆ. ಕಳೆದ ೨-೩ ವರ್ಷದಲ್ಲಿ ಸ್ವಯಂ ಪ್ರೇರಿತರಾಗಿ ಹಲವಾರು ಸ್ಥಳೀಯ ಕನ್ನಡಿಗರು ಹಾಗೂ ಕೆಲವು ಗುಂಪುಗಳು ಕೂಡ ರಾಜ್ಯೋತ್ಸವ ಆಚರಿಸಲು ಶುರು ಮಾಡಿಕೊಂಡಿದ್ದಾರೆ.
ಇದೇ ನವೆಂಬರ್ ೩ ರಂದು, ಗ್ರೇಸ್ ಪಾಯಿಂಟ್ ಎಂಬ ವಿಸ್ತಾರವಾದ ಸಭಾಂಗಣದಲ್ಲಿ ಕನ್ನಡಿಗರುಯುಕೆ ಸಂಸ್ಥೆಯಿಂದ ೧೪ನೇ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ನಡೆದ ಕನ್ನಡ ಹಬ್ಬದಲ್ಲಿ ಸುಮಾರು ೭೫೦ಕ್ಕೂ ಹೆಚ್ಚು ಕನ್ನಡಿಗರ ಉಪಸ್ಥಿತಿಯಲ್ಲಿ ಅದ್ದೊರಿಯಿಂದ ಆಚರಿಸಲಾಗಿತ್ತು. ಕನ್ನಡ ಹಬ್ಬದ ಎಲ್ಲಾ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಮೂಡಿ ಬಂದರೂ ಕೆಲವು ತಾಂತ್ರಿಕ ಅಡಚಣೆಯುಂಟಾಗಿತ್ತು. ಸಭಾಂಗಣ ಹಾಗೂ ಸ್ಟೇಜ್ ಅಷ್ಟೇನೂ ಚೆನ್ನಾಗಿರಲಿಲ್ಲ. ಆದರೆ ಈ ಬಾರಿ ಸುಂದರವಾದ ಸಭಾಂಗಣವನ್ನು ಕಾದಿಡಲಾಗಿದೆ!
ಈ ಬಾರಿಯ ರಾಜ್ಯೋತ್ಸವದ ಮುಖ್ಯ ವಿಶೇಷವೇನೆಂದರೆ ಸುಂದರವಾದ ಹಾಗೂ ವಿಶಾಲವಾದ ೧೦೦೦ ಕ್ಯಾಪಾಸಿಟಿಯ ಸಭಾಂಗಣ, ಸಂಗೀತಾ ರಾಜೀವ್ ಹಾಗೂ ತಂಡದಿಂದ ಹೈ ವೋಲ್ಟೇಜ್ ಸೂಪರ್ ಪರ್ಫಾರ್ಮೆನ್ಸ್, ನಮ್ಮ ಕರ್ನಾಟಕದಿಂದ ಸ್ಪೆಷಲ್ ಆಗಿ ನಿಮಗೋಸ್ಕರ ಬರ್ತಾ ಇರೋ ಕಲ್ಪಶ್ರೀ ತಂಡದಿಂದ ವಿವಿಧ ನೃತ್ಯ, PUPPET ಶೋ ಇದಲ್ಲದೇ ನಮ್ಮ ಯು ಕೆ ಸ್ಥಳೀಯ ಕಲಾವಿದರಿಂದ ಸ್ಕಿಟ್,ನಾಟಕ, ನೃತ್ಯ ಹಾಗೂ ಗಾಯನ ಪ್ರದರ್ಶನ! ಇದಲ್ಲದೇ ನಮ್ಮ ಕನ್ನಡ ಕಲಿ ಮಕ್ಕಳಿಂದ ಕಾರ್ಯಕ್ರಮ.
ಊಟ, ತಿಂಡಿ, ಹರಟೆ ಎಲ್ಲದರ ಮದ್ಯ ಎಲ್ಲ ಕನ್ನಡಿಗರು ಸೇರಿ ಈ ಬಾರಿಯ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಮುಖ್ಯ ಉದ್ದೇಶ. ಕನ್ನಡಿಗರು ಯುಕೆ ಸಂಸ್ಥೆಯ ಕಾರ್ಯಕ್ರಮಕ್ಕೆ ಈಗಾಗಲೇ PURVANKARA ಪ್ಲಾಟಿನಂ ಪ್ರಯೋಜಕರಾಗಿದ್ದರೆ, DHFL , SBI ಹಾಗೂ Freedom Mortgages & Advisors ಸಹ ಪ್ರಯೋಜಕರಾಗಿದ್ದಾರೆ! ಇದಲ್ಲದೇ KUK ರೇಡಿಯೋ ಪಾರ್ಟ್ನರ್ ಆದ ನಮ್ ರೇಡಿಯೋ ಕೂಡ ಇಲ್ಲಿ ಲಂಡನ್ ನಲ್ಲಿ ಉಪಸ್ಥಿತರಿದ್ದು UK ಹಾಗೂ Europe ಕೇಳುಗರಿಗೆ ಒಂದು ಸಿಹಿ ಸುದ್ದಿಯನ್ನು ಕೊಡಲಿದ್ದಾರೆ!
ಸ್ನೇಹಿತರೇ, ವರ್ಷಕ್ಕೊಮ್ಮೆ ಬರುವ ರಾಜ್ಯೋತ್ಸವ ಇವೆಂಟ್ ಮಿಸ್ ಮಾಡ್ಕೋಬೇಡಿ. ಹನಿ ಹನಿ ಕೂಡಿದರೆ ಹಳ್ಳ ಹಾಗೆ ಲಂಡನ್ ಹಾಗೂ ಇಂಗ್ಲೆಂಡಿನ ಸುತ್ತ ಮುತ್ತ ಇರುವ ಎಲ್ಲಾ ಕನ್ನಡಿಗರು ಸೇರಿದರೆ ಯು.ಕೆ ಕನ್ನಡಿಗರ ಶಕ್ತಿ ಇನ್ನಷ್ಟು ಹೆಚ್ಚಾಗುವದು ಖಂಡಿತ. ಇದಲ್ಲದೇ ಚಳಿಗಾಲದ ಚಳಿಯಲ್ಲಿ ಬೆಚ್ಚಗೆ ಫ್ಯಾಮಿಲಿ & ಫ್ರೆಂಡ್ಸ್ ಜೊತೆ ಕುಳಿತು ಕಾರ್ಯಕ್ರಮ ನೋಡುವ ಮಜಾನೇ ಬೇರೆ! ಮಕ್ಕಳಿಗೆ ಬೇಕಾದಷ್ಟು ಮನೋರಂಜನೆ ಇದೆ! ಮದ್ಯಾನ್ನ ಊಟ, ಸಂಜೆ ಚಹಾ ಹಾಗೂ ತಿಂಡಿ ಇದಲ್ಲದೇ ಈ ಬಾರಿ ಡಿನ್ನರ್ ಅರೇಂಜ್ಮೆಂಟ್ ಕೂಡ ಇದೆಯಂತೆ! ೧೨ ವರ್ಷಕ್ಕಿಂತ ಕೆಳಗಿರುವ ಎಲ್ಲಾ ಮಕ್ಕಳಿಗೆ ಉಚಿತ ಪ್ರವೇಶ! ಬುಕ್ ಮಾಡಲು ಕೆಳಗಿನ ಅಂತರ್ಜಾಲ ಪುಟಕ್ಕೆ ಭೇಟಿ ನೀಡಿ…
https://www.kannadigaruuk.com/rajyotsava2018/

ಹಾಗೆ ಇನ್ನೊಂದು ವಿಷಯ. ಸುಮಾರು ಮೂರು ಚಲನಚಿತ್ರಗಳು ಇಂಗ್ಲೆಂಡ್ ಹಾಗೂ ವೇಲ್ಸ್ ನಲ್ಲಿ ನೆಲೆಸಿರುವ ನಮ್ಮ ಕನ್ನಡ ನಿರ್ಮಾಕರರಿಂದ ಮೂಡಿ ಬರುತ್ತಿದೆ. ಕಳೆದ ಎರಡು ತಿಂಗಳಿಂದ ಲಂಡನ್, ವೇಲ್ಸ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನಮ್ಮ ಕನ್ನಡದ ನಟ ನಟಿಯರು, ಇಲ್ಲಿನ ಕನ್ನಡ ಕಲಾವಿದರು, ಬ್ರಿಟಿಷ್ ಕಲಾವಿದರು ಶೂಟಿಂಗ್ ಮಾಡ್ತಾ ಇರೋದನ್ನ ನೋಡಿದೀವಿ! “ಮಾಹೀರ್” ಎಂಬ ರಾಜ್ ಬಿ. ಶೆಟ್ಟಿ ನಟಿಸಿದ ರೋಮಾಂಚಕಾರಿ ಚಿತ್ರ ಇಲ್ಲಿನ ನಮ್ಮ ನೆಚ್ಚಿನ ಕನ್ನಡಿಗರು ಜೊತೆಗೂಡಿ ನಿರ್ಮಾಪಿಸಿದ ಚಿತ್ರ! ಹಾಗೆಯೇ ಲಂಡನ್ನಲ್ಲಿ ಲಂಬೋದರ ಎಂಬ ಚಿತ್ರ ಕೂಡ ನಮ್ಮ ಯುಕೆ ಕನ್ನಡಿಗರು ಸೇರಿ ನಿರ್ಮಾಪಿಸಿದ ಚಿತ್ರ! ಈ ಚಿತ್ರದಲ್ಲಿ ನಮ್ಮ ಯುಕೆ ಕನ್ನಡಿಗರು ಹಣಗೂಡಿದ್ದಲ್ಲದೇ ಆಕ್ಟ್ ಕೂಡ ಮಾಡಿದ್ದಾರೆ! ಮೂರನೆಯದಾಗಿ Dr ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ವಸಿಷ್ಠ ನರಸಿಂಹ ಹಾಗೂ ಮಾನ್ವಿತಾ ಹರೀಶ್ ನಟಿಸಿರುವ ಒಂದು! ಈ ಚಿತ್ರವನ್ನು ಇಲ್ಲಿನ NRI ಗೆಳೆಯರ ಜೊತೆ ನಿರ್ಮಾಪಿಸಲಾಗುತ್ತಿದೆ! ಈಗಾಗಲೇ ಲಂಡನ್ ಹಾಗೂ ವೇಲ್ಸ್ ಭಾಗದಲ್ಲಿ ಶೂಟಿಂಗ್ ಮುಗಿದಿದೆ. ಈ ಚಿತ್ರದಲ್ಲೂ ಒಂದೆರಡು ಯುಕೆ ಕನ್ನಡಿಗರು ಆಕ್ಟ್ ಮಾಡಿದ್ದಾರೆ ಅದರ ಜೊತೆ ಹಲವಾರು ಬ್ರಿಟಿಷ್ ಆಕ್ಟರ್ಸ್ ಕೂಡ ಭಾಗವಹಿಸಿದ್ದಾರೆ. ಮೊದಲು ಕಷ್ಟ ಪಟ್ಟು ಕನ್ನಡ ಚಿತ್ರವನ್ನು ಇಲ್ಲಿ ಬಿತ್ತರಿಸಲಾಗುತ್ತಿತ್ತು ಆದರೆ ಈಗಾಗಲೇ ೩ ಚಿತ್ರಗಳು ಇಲ್ಲಿನ ಕನ್ನಡಿಗರು ನಿರ್ಮಾಪಿಸುತ್ತಿರುವದು ನಮಗೆಲ್ಲಾ ಹೆಮ್ಮೆಯ ಸಂಗತಿ. ಹೀಗಾಗಿ ಎಲ್ಲರೂ ನಮ್ಮ ಯು.ಕೆ ನಿರ್ಮಾಪಕ ಗೆಳೆಯರಿಗೆ ಚಿತ್ರದ ಪ್ರಮೋಷನ್ ಬೇಕಿದ್ದರೆ ಸಹಾಯ ಮಾಡಿ ಹಾಗೂ ಅದು ಇಲ್ಲಿ ಸ್ಕ್ರೀನ್ ಆದಾಗ ನಾವೆಲ್ಲ ನೋಡಿ ಪ್ರೋತ್ಸಾಹಿಸೋಣ!
ಧನ್ಯವಾದ! ಮತ್ತೆ ಭೇಟಿಯಾಗೋಣ ಇನ್ನೊಂದು ಬ್ಲಾಗ್ ಮುಕಾಂತರ.

Comments

comments